ಜಿಲ್ಲೆ

ಹಿಂದುಳಿದವರ ಕಡೆಗಣನೆ ಸಲ್ಲದು

Davangere - Desk - Mahesh Babu E

ಚಳ್ಳಕೆರೆ: ಸಂಸತ್ತಿನಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಮಸೂದಿ ಜಾರಿಯಾಗಿರುವುದು ಸ್ವಾಗತಾರ್ಹ. ಆದರೆ, ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲು ಸೌಲಭ್ಯ ಕಲ್ಪಿಸದಿರುವುದು ಘೋರ ಅನ್ಯಾಯ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಆರ್.ದೊಡ್ಡರಂಗಪ್ಪ ದೂರಿದ್ದಾರೆ.

ಸರ್ಕಾರದ ಈ ನಡೆಯಿಂದ ಮಹಿಳೆಯರ ಸಂಪೂರ್ಣ ಸಬಲೀಕರಣ ಈಡೇರುವುದಿಲ್ಲ. ಹಿಂದುಳಿದ ವರ್ಗಗಳ ಮಹಿಳೆಯರು ರಾಜಕೀಯ ಮತ್ತು ಸಾಮಾಜಿಕವಾಗಿ ಸ್ಥಾನಮಾನ ಪಡೆಯಲು ವಿಫಲರಾಗುತ್ತಾರೆ. ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ, ಶೇ.33ರ ಸ್ಥಾನದಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲು ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.