ಬೀಳಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ಆಸ್ತಿಯನ್ನು ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅನೇಕ ರೈತರ ಜಮೀನುಗಳ ಉತಾರದಲ್ಲಿ ವಕ್ಫ್ ಆಸ್ತಿಯಾಗಿ ನಮೂದು ಮಾಡುವ ಕಾರ್ಯವನ್ನು ಸರ್ಕಾರ ಕೈಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ಆರ್. ನಿರಾಣಿ ಆರೋಪಿಸಿದರು.
ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್‌ರವರು ವಿಜಯಪುರ ಜಿಲ್ಲೆಗೆ ಆಗಮಿಸಿ ಜಿಲ್ಲಾಧಿಕಾರಿಗಳ ಮೂಲಕ ಅನೇಕ ರೈತರಿಗೆ ನೋಟಿಸ್ ಕೊಡಿಸುವಂತಹ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಪಕ್ಷ ಕಾಯ್ದೆಯ ಕಾರಣಕ್ಕಾಗಿ ರೈತರು, ಮಠಮಾನ್ಯಗಳು ಆತಂಕದಲ್ಲಿದ್ದಾರೆ. ನೂರಾರು ವರ್ಷಗಳಿಂದ ಹಿರಿಯರು ಮಾಡಿಕೊಂಡು ಬಂದ ಭೂಮಿಯನ್ನು ವಕ್ಫ್ ಆಸ್ತಿಯಾಗಿ ಪರಿವರ್ತಿಸುವಂತ ಹುನ್ನಾರ ಕಾಂಗ್ರೆಸ್‌ದಿಂದ ನಡೆದಿದೆ. ಅಲ್ಪಸಂಖ್ಯಾತ ಸಮುದಾಯಗಳ ತೃಪ್ತಿಪಡಿಸುವ ಉದ್ದೇಶದಿಂದ ರೈತರನ್ನು ಒಕ್ಕಲೆಬ್ಬಿಸುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ಅಧ್ಯಯನ ತಂಡ ವಿಜಯಪುರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದಾಗ ಪಡಗನೂರ ಗ್ರಾಮದ ಪುರಾತನ ಸೋಮೇಶ್ವರ ದೇವಾಲಯ ವಕ್ಫ್‌ಗೆ ನಮೂದಾಗಿದೆ. 50 ವರ್ಷದವರೆಗೂ ಇಂದೀಕರಣ ಮಾಡದ ಇಲಾಖೆಗೆ ಈ ತಕ್ಷಣ ಇಂದೀಕರಿಸಿಕೊಳ್ಳುವ ಹಿಂದಿನ ಉದ್ದೇಶ-ಕಾಂಗ್ರೆಸ್ ನೇತೃತ್ವದ್ದು ಎಂದು ಸಿದ್ದರಾಮಯ್ಯ ಸರ್ಕಾರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ.
ಆರ್‌ಟಿಸಿ ಕಲಂ 09 ಹಾಗೂ 11ರಲ್ಲಿ ಪತ್ರ ಹೆಸರು ನಮೂದಿಸಲಾಗಿದೆ. ಹೀಗೆ ರೈತರು ವಿಭಿನ್ನ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು ಕಡೆ ಬಡ ಮುಸ್ಲಿಮರನ್ನು ಉದ್ಧಾರ ಮಾಡಬೇಕಾದ ಆಸ್ತಿಗಳನ್ನು ಲಪಟಾಯಿಸಿ ಲೂಟಿ ಮಾಡಿರುವ ಕುರಿತು ಸುದೀರ್ಘ ತನಿಖೆ ಆಗಬೇಕು. ಸರ್ಕಾರದ ಆಸ್ತಿಗಳನ್ನು, ಹಿಂದುಗಳ ಮಠಮಾನ್ಯಗಳ ಏಕಪಕ್ಷೀಯವಾಗಿ, ಕೊಟ್ಟ ದಾಖಲೆಗಳ ಸೃಷ್ಟಿ, ಮಾಡಿಕೊಂಡಿರುವುದು ತನಿಖೆಯಾಗಲಿ ಎಂದು ಭಾರತೀಯ ಜನತಾ ಪಾರ್ಟಿ ಆಗ್ರಹಿಸುತ್ತಿದೆ ಎಂದರು.
ಜಿಪಂ ಮಾಜಿ ಸದಸ್ಯ ಎಂ. ಎಂ. ಶಂಭೂಜಿ, ಮಲ್ಲಿಕಾರ್ಜುನ ಅಂಗಡಿ, ಬಸವರಾಜ್ ಉಮಚಗಿಮಠ, ಹೊಳೆಬಸು ಬಾಳಶೆಟ್ಟಿ, ಮುತ್ತು ಬೋರ್ಜಿ, ಸಿದ್ದು ಮಾದರ ಇದ್ದರು.