ಜಿಲ್ಲೆ

ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರರಿಬ್ಬರ ಸಾವು

ನಾಗೇಂದ್ರಪ್ಪ ಕೆ.ಎನ್.

ಹೊಸದುರ್ಗ: ತಾಲೂಕಿನ ಬೆಲಗೂರು ಸಮೀಪದ ಕೊಪ್ಪಲು ಗೇಟ್‌ನಲ್ಲಿ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಯುವಕರಿಬ್ಬರು ಮೃತಪಟ್ಟಿದ್ದಾರೆ.

ಬೆಲಗೂರಿನ ಮಾರುತಿ(21), ಪ್ರಕಾಶ (21) ಮೃತ ದುರ್ದೈವಿಗಳು. ಬೆಲಗೂರಿನಿಂದ ಹಾಗಲಕೆರೆ ಹ್ಯಾಂಡ್ ಪೋಸ್ಟ್ ಕಡೆ ಬೈಕಿನಲ್ಲಿ ತೆರಳುತ್ತಿದ್ದ ಯುವಕರು ವಾಹನವೊಂದನ್ನು ಓವರ್ ಟೇಕ್ ಮಾಡುವ ವೇಳೆ ಎದುರುಗಡೆಯಿಂದ ಬಂದ ಟಾಟಾಏಸ್ ವಾಹನಕ್ಕೆ ಡಿಕ್ಕಿಯಾಗಿದೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪ್ರಕಾಶ ಊರಿಗೆ ಬಂದಿದ್ದ. ಶನಿವಾರ ಬೆಂಗಳೂರಿಗೆ ವಾಪಸಾಗಲು ಹಾಗಲಕೆರೆ ಹ್ಯಾಂಡ್ ಪೋಸ್ಟ್‌ಗೆ ಬಿಟ್ಟು ಬರುವಂತೆ ಸ್ನೇಹಿತ ಮಾರುತಿಯನ್ನು ಬೈಕಿನಲ್ಲಿ ಕರೆದೊಯ್ಯುವಾಗ ಘಟನೆ ಸಂಭವಿಸಿದೆ.

ಇಬ್ಬರ ತಲೆಗೂ ಬಲವಾದ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಇಬ್ಬರೂ ಮೃತಪಟ್ಟಿದ್ದಾರೆ. ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಕುಮಾರಸ್ವಾಮಿ ಭೇಟಿ ನೀಡಿದ್ದರು.