ಜಿಲ್ಲೆ

ಎಸ್​ಐಟಿಯಿಂದ ಸತ್ಯಾಂಶ ಬಯಲು

ವಿಠ್ಠಲ ಹಣಮಂತ ಬಾಳೇಕುಂದ್ರಿ

ಅಥಣಿ: ಧರ್ಮಸ್ಥಳದಲ್ಲಿ ಈ ಹಿಂದೆ ಕೊಲೆ, ಅತ್ಯಾಚಾರ ನಡೆದಿರಬಹುದು. ಅದರ ಸತ್ಯಾಂಶ ಹೊರಬರಲು ತನಿಖೆ ನಡೆದಿದೆ. ಆದರೆ, ಸುಳ್ಳು ಆರೋಪ ಮಾಡುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೆಗೊಳ್ಳಬೇಕು ಎಂದು ಗಹ ಸಚಿವರು ಮತ್ತು ಸರ್ಕಾರಕ್ಕೆ ಒತ್ತಾಯಿಸುವೆ ಎಂದು ಶಾಸಕ ಲಕ್ಷ$್ಮಣ ಸವದಿ ಹೇಳಿದರು.

ಪಟ್ಟಣದ ಸ್ವಗಹದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿ ಶವ ಹೂತಿರುವ ಬಗ್ಗೆ ಎಲ್ಲ ಸ್ಥಳಗಳಲ್ಲಿ ಎಸ್​ಐಟಿಯಿಂದ ಪರಿಶೀಲನೆ ಆಗಿದೆ. ಅದರೊಂದಿಗೆ ತನಿಖೆಯೂ ನಡೆಯುತ್ತಿದೆ. ಜನರ ಧಾರ್ಮಿಕ ಮನೋಭಾವಕ್ಕೆ ಧಕ್ಕೆ ಬಂದಿದೆ ಎಂದರು.

ಬಿಜೆಪಿ ಡೋಂಗಿ ರಾಜಕಾರಣ ಬಿಡಬೇಕು. ಬಿಜೆಪಿಗರು ಎಸ್​ಐಟಿ ತನಿಖೆ ಆರಂಭಿಸಿದಾಗ ಸ್ವಾಗತಿಸಿ ಇಂದು ವಿರೋಧಿಸುವ ಮೂಲಕ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.