ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯರಲ್ಲಿ ನಿಸರ್ಗ ದೇವತೆ ಆರಾಧಿಸುವ ಪರಂಪರೆ ಇದೆ. ಪಾರಂಪರಿಕ ಕೃಷಿಯು ನಂದಿ ಆಧಾರಿತವಾಗಿದ್ದರಿಂದ ಸುಸ್ಥಿರ ಭೂ ಫಲವತ್ತತೆ ಕಾಯ್ದುಕೊಳ್ಳುವ ಶಕ್ತಿ ಹೊಂದಿತ್ತು ಎಂದು ಕಪ್ಪತಗುಡ್ಡ ನಂದಿವೇರಿ ಸಂಸ್ಥಾನಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ನಂದಿಭೂಷಿತ ಕಪ್ಪತಜ್ಯೋತಿ ಯಾತ್ರೆ ನಿಮಿತ್ತ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ನಂದಿ ಕೃಷಿ ಸಂಕಲ್ಪ ಸಭೆಯಲ್ಲಿ ಅವರು ಮಾತನಾಡಿದರು.
ರಾಸಾಯನಿಕ ಕೃಷಿಯಿಂದ ನಶಿಸುತ್ತಿರುವ ಭೂ ಫಲವತ್ತತೆಯ ಪುನರ್ ಸ್ಥಾಪನೆಗೆ ಏರ್ಪಡಿಸಿರುವ ನಂದಿ ಭೂಷಿತ ಕಪ್ಪತಜ್ಯೋತಿ ಯಾತ್ರೆಯ ಮೂಲ ಉದ್ದೇಶ ಮಣ್ಣು ಸಂರಕ್ಷಣೆ, ಜಲ ಸಂರಕ್ಷಣೆಯೊಂದಿಗೆ ವಿಷಮುಕ್ತ, ರಾಸಾಯನಿಕ ಮುಕ್ತ ಆಹಾರ ಉತ್ಪಾದನೆಗೆ ರೈತರಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದರು.
ಯಾತ್ರೆ ಪ್ರಧಾನ ಸಂಚಾಲಕ ಬಾಲಚಂದ್ರ ಜಾಬಶೆಟ್ಟಿ, ಶಂಕರರೆಡ್ಡಿ ಪಾಟೀಲ, ಭಾರತಿದೇವಿ ರಾಜಗುರು ಹಾಗೂ ಮಂಜುಳಾ ಹೊಸೂರ ಮಾತನಾಡಿದರು.
ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಶಾಂತವೀರ ಬೆಟಗೇರಿ, ಅನಿಲ ಅಂಗಡಿ, ಮಹಾದೇವಿ ಕೊಪ್ಪದ, ಮಹಾಂತೇಶ ಪೂಜಾರ, ಸರಸ್ವತಿ ಪೂಜಾರ, ಸಿಸ್ಟರ್ ಲಿನೆಟ್, ಗೀತಾ ಕುಂಬಿ, ಸುರೇಶ ಹಾಲಭಾವಿ, ಎಸ್.ಜಿ. ಹಿರೇಮಠ, ಗಂಗಾಧರ ಗಿರಿಜಣ್ಣವರ, ಬಾಬು ಮೊಟಗಿ, ಉಮಾ ಪುರಾಣಿಕ, ಸವಿತಾ ನಡಕಟ್ಟಿ, ರೂಪಾ ಅಡಕಿ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಕೆ.ಎಚ್. ನಾಯಕ ವಂದಿಸಿದರು.