ಜಿಲ್ಲೆ

ಕುಮದ್ವತಿ ನದಿಗೆ ಉರುಳಿದ ಟ್ರ್ಯಾಕ್ಟರ್

ವಿವೇಕಾನಂದ ದಾಸನಕೊಪ್ಪ

ರಟ್ಟಿಹಳ್ಳಿ: ಗೊಬ್ಬರ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕುಮದ್ವತಿ ನದಿಗೆ ಉರುಳಿದ ಘಟನೆ ತಾಲೂಕಿನ ತೋಟಗಂಟಿ ಗ್ರಾಮದ ಬಳಿ ಸೋಮವಾರ ಸಂಭವಿಸಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಹಾನಗಲ್ಲ ತಾಲೂಕಿನ ಮೈಲಾರಪ್ಪ ಅಶೋಕಪ್ಪ ಬೆಳವತ್ತಿ ಮತ್ತು ರುದ್ರಪ್ಪ ಫಕೀರಪ್ಪ ಬೆಳವತ್ತಿ ಗಾಯಗೊಂಡವರು. ಹಾನಗಲ್ಲ ತಾಲೂಕಿನ ಯಳ್ಳೂರ ಗ್ರಾಮದಿಂದ ರಟ್ಟಿಹಳ್ಳಿ ತಾಲೂಕಿನ ಕಣವಿಸಿದ್ದಗೇರಿ ಗ್ರಾಮಕ್ಕೆ 2 ಟ್ರೇಲರ್​ನಲ್ಲಿ ಗೊಬ್ಬರ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ತೋಟಗಂಟಿ ಗ್ರಾಮದ ಸೇತುವೆ ಕಂ ಬಾಂದಾರ್ ಮೇಲಿಂದ ಕುಮದ್ವತಿ ನದಿಗೆ ಉರುಳಿದೆ. ಟ್ರ್ಯಾಕ್ಟರ್​ನಲ್ಲಿದ್ದ ಇಬ್ಬರು ಜಿಗಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಕುಮದ್ವತಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಟ್ರ್ಯಾಕ್ಟರ್ ಮತು ಟ್ರೇಲರ್ ಮೇಲೆ ಕಾಣಿಸುತ್ತಿವೆ.