ಜಿಲ್ಲೆ

ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕ ಕ್ರಾಂತಿ ; ಹಳ್ಳಿ ಹಳ್ಳಿಗಳಲ್ಲಿ ಜಿಯೋ ಟವರ್

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿಯೂ ರಿಲಯನ್ಸ್ ಜಿಯೋದ ನೆಟ್‌ವರ್ಕ್ ಒದಗಿಸಿಕೊಡುವುದಕ್ಕಾಗಿ ಟವರ್ ಸ್ಥಾಪಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹೂಗ್ಯಂನಂತಹ ಗ್ರಾಮಗಳಲ್ಲಿ ಜಿಯೋ ಟವರ್ ಸ್ಥಾಪಿಸುವಲ್ಲಿ ಯಶಸ್ಸು ಕಂಡಿದೆ.

ಪರಿಸರ ಮತ್ತು ಭೌಗೋಳಿಕ ಸವಾಲುಗಳನ್ನು ಮೀರಿ ಜಿಯೋ 4ಜಿ ಮತ್ತು 5ಜಿ ನೆಟ್‌ವರ್ಕ್ ಸೇವೆಯನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಾದ್ಯಂತ ಮುನ್ನೂರಕ್ಕೂ ಹೆಚ್ಚು ತಾಲ್ಲೂಕುಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದ್ದು, ಇದರಿಂದ ಆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಅನೇಕ ಹಳ್ಳಿಗಳು ಜಿಯೋ ನೆಟ್‌ವರ್ಕ್‌ನ ಪ್ರಯೋಜನ ಪಡೆಯುತ್ತಿವೆ.

ಶಿಕ್ಷಣ , ಆರೋಗ್ಯ, ಉದ್ಯೋಗ ಮತ್ತಿತರ ಆನ್‌ಲೈನ್ ಸೇವೆಗಳು ಗ್ರಾಮೀಣ ಪ್ರದೇಶದ ಜನರಿಗೂ ದೊರೆಯುವಲ್ಲಿ ಜಿಯೋ ಪಾತ್ರ ಪ್ರಮುಖವಾಗಿದೆ. ಜೊತೆಗೆ ‘ಅನಿಯಮಿತ ವಾಯ್ಸ್ ಮತ್ತು ಡೇಟಾ ಪ್ರಯೋಜನಗಳು ದೊರೆಯುತ್ತಿದ್ದು, ಜಿಯೋದ ಪ್ರೀಮಿಯಂ ಅಪ್ಲಿಕೇಷನ್‌ಗಳಾದ ಜಿಯೋಟಿವಿ ಮತ್ತು ಜಿಯೋಸಿನಿಮಾದ ಮನರಂಜನೆಯನ್ನು ಸಹ ಪಡೆಯಬಹುದಾಗಿದೆ.