ವಿಜಯಪುರದ ಸಮೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರವಾಸಿ ಮಾರ್ಗದರ್ಶಕರಿಗೆ ಸಮವಸ ವಿತರಿಸಲಾಯಿತು. ಅಂಬಾದಾಸ ಜೋಶಿ, ರಾಜಶೇಖರ ಕಲ್ಯಾಣಮಠ, ಡಾ. ಮಾಧವ ಗುಡಿ ಮತ್ತಿತರರಿದ್ದಾರೆ. 
ಜಿಲ್ಲೆ

ಪ್ರವಾಸಿ ಮಾರ್ಗದರ್ಶಕ ಸೇವೆ ಅನನ್ಯ

ವಿಜಯಪುರ: "ದೇಶ ಸುತ್ತು ಕೋಶ ಓದು' ಎಂಬ ನಾಣ್ಣುಡಿಯಂತೆ ಸದ್ಯ ನಮ್ಮ ವಿಜಯಪುರ ನಗರವು ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.

ಇಲ್ಲಿನ ಸ್ಮಾರಕಗಳಿಂದ ನಗರದ ಸೌಂದರ್ಯ ಹೆಚ್ಚುವ ಜತೆಗೆ ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿವೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಕ್ರಿಯಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಅಂಬಾದಾಸ ಜೋಶಿ ಹೇಳಿದರು.

ನಗರದ ಸಮೃದ್ಧಿ ಸಂಸ್ಥೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಕ್ರಿಯಾ ಸಮಿತಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡ ಪ್ರವಾಸಿ ಮಾರ್ಗದರ್ಶಕರಿಗೆ (ಗೈಡ್ಸ್​ಗಳಿಗೆ) ಸಮವಸ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗುಮ್ಮಟ ನಗರಿ ಸದ್ಯ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ.

ವಾಸಿಗರಿಗೆ ಸ್ಥಳದ ಪ್ರಾಮುಖ್ಯತೆ ತಿಳಿಸಿಕೊಡುವ ಕಾರ್ಯವನ್ನು ಮಾರ್ಗದರ್ಶಕರು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದ್ದು, ಅವರ ಸೇವೆ ಸ್ಮರಣೀಯ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ನಾವೆಲ್ಲರೂ ಇನ್ನಷ್ಟು ಶ್ರಮಿಸೋಣ ಎಂದು ಸಲಹೆ ನೀಡಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಿ. ಎಂ. ಮಾಲಿಪಾಟೀಲ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಕ್ರಿಯಾ ಸಮಿತಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವು ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿದ್ದು, ಇಂದು ಪ್ರವಾಸಿ ಗೈಡ್ಸ್​ಗಳಿಗೆ ಸಮವಸ ನೀಡಿ ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾನೀಯ ಎಂದರು.

ಗೈಡ್ಸ್​ ಸಂದ ಅಧ್ಯಕ್ಷ ರಾಜಶೇಖರ ಕಲ್ಯಾಣಮಠ ಮಾತನಾಡಿ, ಪ್ರವಾಸಿ ಮಾರ್ಗದರ್ಶಕರಿಗೆ ಯಾವುದೇ ರೀತಿಯ ಆರ್ಥಿಕ ಭದ್ರತೆ ಒದಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಸರ್ಕಾರ ಕೂಡಲೇ ಮಾರ್ಗದರ್ಶಕರಿಗೆ ಉತ್ತಮ ವೇತನ ಹಾಗೂ ಮುಂತಾದ ಸೌಲಭ್ಯ ನೀಡಿ ಇನ್ನಷ್ಟು ಪ್ರವಾಸೋದ್ಯಮ ಉತ್ತೇಜಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಪ್ರವಾಸಿ ಮಾರ್ಗದರ್ಶಕರಿಗೆ ಸಮವಸ ವಿತರಿಸಲಾಯಿತು. ಸಮೃದ್ಧಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮೇಶ ಬಿ.ಡಿ., ಅಧ್ಯಕ್ಷತೆ ವಹಿಸಿದ್ದರು. ಪ್ರವಿಣ ಪಾಂಡೆ, ವಿಜಯಕುಮಾರ ಬಂಡಿ ವೇದಿಕೆಯಲ್ಲಿದ್ದರು. ಕೀರ್ತಿ ದೇಗಿನಾಳ ಪ್ರಾರ್ಥಿಸಿದರು. ಡಾ. ಮಾಧವ ಗುಡಿ ಸ್ವಾಗತಿಸಿ ಪರಿಚಯಿಸಿದರು. ಮಹಾದೇವ ರೆಬಿನಾಳ ಪ್ರಾಸ್ತಾವಿಕ ಮಾತಮಾಡಿದರು. ಸುಭಾಸಚಂದ್ರ ಕನ್ನೂರ ನಿರೂಪಿಸಿದರು. ಸಿದ್ರಾಮಯ್ಯ ಲಕ್ಕುಂಡಿಮಠ, ಆನಂದ ಬಾಹು, ನಾಗರಾಜ ಪತ್ತಾರ, ರಾಜೇಂದ್ರ ಗೊಳಸಂಗಿ, ಉದಯ ಬೇಲಣ್ಣನವರ ಮತ್ತಿತರರಿದ್ದರು.