ಮುಂಡರಗಿ: ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್, ಮೌಂಟ್ ಬ್ಯಾಟನ್, ಬರಾಕ್ ಓಬಾಮ ಅಂತವರಿಗೆ ಮಹಾತ್ಮ ಗಾಂಧೀಜಿ ಸ್ಪೂರ್ತಿಯಾಗಿದ್ದರು. ಈಗಲೂ ನಮಗೆಲ್ಲ ಮಾದರಿಯಾಗಿರುತ್ತಾರೆ ಎಂದು ವಿಜಯಪುರದ ಗಾಂಧಿ ಪ್ರತಿಷ್ಠಾನದ ಸಂಸ್ಥಾಪಕ ನಿಲೇಶ ಬೇನಾಳ (ನೇತಾಜಿ ಗಾಂಧಿ) ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಐಕ್ಯೂಎಸಿ ಘಟಕ ಮತ್ತು ಇತಿಹಾಸ ವಿಭಾಗದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಗಾಂಧಿ ಭಾರತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸೋಷಿಯಲ್ ಮೀಡಿಯಾ ಜಮಾನಾದಲ್ಲಿ ಗಾಂಧೀಜಿ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ಅದರ ಬಗ್ಗೆ ಯಾರೊಬ್ಬರೂ ಕಿವಿಗೊಡಬಾರದು ಎಂದರು.
ಪ್ರಾಚಾರ್ಯ ಎಸ್.ಆರ್. ಚಿಗರಿ ಅಧ್ಯಕ್ಷತೆ ವಹಿಸಿದ್ದರು. ಹನುಮಂತಪ್ಪ ಕೆ.ವೈ. ಮಾತನಾಡಿದರು. ಡಾ.ಜಗದೀಶ ಹುಲ್ಲೂರ, ಉಮಾ ಕೊಳ್ಳಿ, ಶಂಕರಪ್ಪ ಬಡಿಗೇರ, ಕರಿಬಸಪ್ಪ, ಡಾ. ಭಾರತಿ ಬ್ಯಾಳಿ ಉಪಸ್ಥಿತರಿದ್ದರು. ಕಾಗನೂರ ಸಂತೋಷ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಜಿತ್ ಬನ್ನಿಕೊಪ್ಪ, ಕಾವೇರಿ ಭೋಲಾ ನಿರ್ವಹಿಸಿದರು.