ಜಿಲ್ಲೆ

ಬಾಗಿಲ ಚಿಲಕ ತೆಗೆದು ಮನೆಯೊಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿ

ಮೈಸೂರು: ನಗರದ ಶಕ್ತಿನಗರದಲ್ಲಿ ಕಿಟಕಿ ಮೂಲಕ ಮನೆ ಬಾಗಿಲ ಚಿಲಕ ತೆಗೆದು ಒಳ ನುಗ್ಗಿರುವ ಕಳ್ಳರು, 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.


ಮನೆ ನಿವಾಸಿ ಅಶೋಕ್‌ಕುಮಾರ್ ಮೇ 11ರಂದು ರಾತ್ರಿ ಕುಟುಂಬದ ಸಹಿತ ಅತ್ತೆ ಮನೆಗೆ ಹೋಗಿದ್ದರು. ಮರುದಿನ ಮನೆಗೆ ಮರಳಿ ಬಂದಾಗ ಮನೆಯ ಮುಂಬಾಗಿಲು ತೆರೆದುಕೊಂಡಿತ್ತು.

ಒಳ ಹೋದಾಗ ಮಲಗುವ ಕೊಠಡಿಯಲ್ಲಿರುವ ಬೀರುವಿನಲ್ಲಿದ್ದ ಚಿನ್ನಾಭರಣದ ಬಾಕ್ಸ್‌ಗಳು ಹಾಸಿಗೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.