ಜಿಲ್ಲೆ

ಬೇಕರಿಯಲ್ಲಿಟ್ಟ 3.50 ಲಕ್ಷ ರೂ. ಹಣ ಕಳ್ಳತನ

ರಾಣೆಬೆನ್ನೂರ: ಬೇಕರಿಯಲ್ಲಿಟ್ಟ 3.50 ಲಕ್ಷ ರೂ. ಹಣವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಘಟನೆ ಇಲ್ಲಿಯ ಗೌರಿಶಂಕರ ನಗರದಲ್ಲಿ ಶುಕ್ರವಾರ ನಡೆದಿದೆ.


ನವೀಕುಮಾರ ಗೋವಿಂದರಾಜು ಎಂಬುವರ ಹಣ ಕಳ್ಳತನ ಆಗಿರುವುದು.


ಈತ ಬೇಕರಿಯ ಟೇಬಲ್ ಡ್ರಾದಲ್ಲಿ ಇಟ್ಟಿದ್ದ ಹಣವನ್ನು ಯಾರೋ ಖದೀಮರು ದೋಚಿಕೊಂಡು ಪರಾರಿಯಾಗಿದ್ದಾರೆ. ಅದೇ ದಿನ ಬೇಕರಿಯಲ್ಲಿ ಕೆಲಸ ಮಾಡುವ ಸುನೀಲ ಎಂಬ ವ್ಯಕ್ತಿ ಕೆಲಸ ಬಿಟ್ಟು ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.