ರಾಯಚೂರಿನ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಿಳಾ ವಕೀಲರ ರಾಜ್ಯ ಸಮಾವೇಶವನ್ನು ಹೈಕೋರ್ಟ್ ನ್ಯಾಯಾೀಶೆ, ಎಂ.ಜಿ.ಉಮಾ ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾೀಶ ಮಾರುತಿ ಬಾಗಡೆ, ರಾಷ್ಟ್ರೀಯ ಉಪಾಧಕ್ಷೆ ಜಿ.ಚಮಕಿ ರಾಜ್, ಒಕ್ಕೂಟದ ರಾಜ್ಯಾಧ್ಯಕ್ಷ ಹರೀಂದ್ರ, ಉಪಾಧ್ಯಕ್ಷ ಎನ್.ಶಂಕ್ರಪ್ಪ, ವಕೀಲರಾದ ಕೆ.ಕೋಟೇಶ್ವರ ರಾವ್, ಸವಿತಾ ಪಾಟೀಲ್, ನಾಗರಾಜ ಮಸ್ಕಿ, ಈರಮ್ಮ, ಉದಯಕುಮಾರ ಮಲ್ದಿ ಇದ್ದರು. 
ಜಿಲ್ಲೆ

ಮಹಿಳೆಯರ ಸಮಸ್ಯೆ ಆಲಿಸದಿರುವುದು ಪ್ರವೃತ್ತಿಯಾಗಿದೆ

ರಾಚಯ್ಯ ಸ್ವಾಮಿ

ರಾಯಚೂರು: ಅನೇಕ ವರ್ಷಗಳಿಂದ ಸಮಾಜದಲ್ಲಿ ಮಹಿಳೆಯರ ಸಮಸ್ಯೆ ಆಲಿಸದಿರುವುದು ಪ್ರವೃತ್ತಿಯಾಗಿದೆ. ಇದರಿಂದಾಗಿ ಮಹಿಳೆಯರ ಸಾಮರ್ಥದಲ್ಲಿ ಕೊರತೆಯಾಗುವಂತಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಉಮಾ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ ಹಾಗೂ ಅಖಿಲ ಭಾರತ ವಕೀಲರ ಮಹಿಳಾ ಉಪ ಸಮಿತಿಯಿಂದ ಭಾನುವಾರ ಏರ್ಪಡಿಸಿದ್ದ ಮಹಿಳಾ ವಕೀಲರ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ನಾಗರಿಕ ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೆ ಸಮಾನವಾಗಿ ಕೆಲಸ ಮಾಡುತ್ತಿದ್ದು, ನ್ಯಾಯಾಂಗದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಕೇಳುವವರಿಲ್ಲದಂತಾಗಿದೆ. ಕಾಯಕದಲ್ಲಿ ಮಹಿಳೆ ಸಮರ್ಥಳು ಎಂದು ತೋರಿಸುವ ನಿಟ್ಟಿನಲ್ಲಿ ನೈಪುಣ್ಯತೆಯನ್ನು ಮಹಿಳಾ ವಕೀಲರು ಬೆಳೆಸಿಕೊಳ್ಳಬೇಕು.
ವಕೀಲ ವೃತ್ತಿ ಸಮಾಜ ಸುಧಾರಕ ಕೆಲಸವಿದ್ದಂತೆ. ಅನ್ಯಾಯ ಮತ್ತು ಗಟ್ಟಿ ಧ್ವನಿಯಲ್ಲಿ ಮಾತನಾಡಲು, ನ್ಯಾಯಾಲಯದಲ್ಲಿ ವಾದ ಮಂಡಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಸಾಕಷ್ಟು ಭ್ರಷ್ಟಾಚಾರವನ್ನು ಕಾಣುತ್ತಿದ್ದಾರೆ. ನ್ಯಾಯಾಂಗದ ಕಡೆ ಅದನ್ನು ಬರಲು ಅವಕಾಶ ಕೊಡಬಾರದು ಎಂದು ಎಂ.ಜಿ.ಉಮಾ ಹೇಳಿದರು.
ವಕೀಲರ ಒಕ್ಕೂಟದ ರಾಷ್ಟ್ರೀಯ ಉಪಾಧಕ್ಷೆ ಜಿ.ಚಮಕಿ ರಾಜ್ ಮಾತನಾಡಿ, ಸಮಾಜದಲ್ಲಿ ವ್ಯಕ್ತಿಗೆ ಅನ್ಯಾಯವಾದಾಗ ದೇವರು ಮತ್ತು ಕೋರ್ಟ್‌ಗೆ ಮೋರೆ ಹೋಗುತ್ತಾನೆ. ನ್ಯಾಯಾಂಗದ ವ್ಯವಸ್ಥೆಯಲ್ಲಿ ನ್ಯಾಯ ಒದಗಿಸಿಕೊಡುವ ಮೂಲಕ ಜನರು ನ್ಯಾಯಾಂಗದ ಬಗ್ಗೆ ವಿಶ್ವಾಸವಿಡುವಂತೆ ಮಾಡಬೇಕು.
ದೇಶದಲ್ಲಿ ಶೇ.15ರಷ್ಟು ಮಹಿಳೆಯರು ಮಾತ್ರ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಲ್ಲಿ ಶೇ.15ರಷ್ಟು ಮಾತ್ರ ವಕೀಲ ವೃತ್ತಿಯಾಗಿದ್ದಾರೆ. ಮಹಿಳೆಯರು ನ್ಯಾಯಾಲಯದಲ್ಲಿನ ಸವಾಲುಗಳಿಗೆ ಸಮರ್ಥ ಪರಿಹಾರ ಕಂಡು ಕೊಳ್ಳಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾೀಶ ಮಾರುತಿ ಬಾಗಡೆ, ಒಕ್ಕೂಟದ ರಾಜ್ಯಾಧ್ಯಕ್ಷ ಹರೀಂದ್ರ, ಉಪಾಧ್ಯಕ್ಷ ಎನ್.ಶಂಕ್ರಪ್ಪ, ವಕೀಲರಾದ ಕೆ.ಕೋಟೇಶ್ವರ ರಾವ್, ಸವಿತಾ ಪಾಟೀಲ್, ನಾಗರಾಜ ಮಸ್ಕಿ, ಶ್ರೀಕಾಂತರಾವ್, ಶಶಿಧರಗೌಡ, ಈರಮ್ಮ, ಉದಯಕುಮಾರ ಮಲ್ದಿ ಉಪಸ್ಥಿತರಿದ್ದರು.