The temple of Lord Hanuman is magnificent. 
ಜಿಲ್ಲೆ

ಹನುಮಂತ ದೇವರ ಓಕುಳಿ ಅದ್ದೂರಿ

ಲೋಕಾಪುರ: ಸಮೀಪದ ಚಿಕ್ಕೂರ ಗ್ರಾಮದಲ್ಲಿ ಹನುಮಂತ ದೇವರ ಓಕುಳಿ ವಿಜೃಂಭಣೆಯಿಂದ ಜರುಗಿತು.

ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ಗ್ರಾಮದೇವತೆ ಲಕ್ಷ್ಮೀದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಹನುಮಂತ ದೇವರಿಗೆ ಅಭಿಷೇಕ, ಎಲೆ ಪೂಜೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಓಕುಳಿಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಗ್ರಾಮದ ಹಿರಿಯರಾದ ವೈ.ಜಿ. ದಾಸರಡ್ಡಿ, ಕೆ.ಜಿ. ದಾಸನಗೌಡ್ರ, ಸತೀಶ ದಾಸರಡ್ಡಿ, ಗೋವಿಂದಪ್ಪ ದಾಸನಗೌಡ್ರ, ಸುರೇಶ ಪಾಟೀಲ, ಪಾಂಡು ದಾಸರಡ್ಡಿ, ಸಂಜು ದಾಸರಡ್ಡಿ, ಯಮನಪ್ಪ ಪೂಜಾರ, ಮಾರುತಿ ಪೂಜಾರ ಇದ್ದರು.