ಮುಧೋಳ ಕಸಾಪ ಭವನದಲ್ಲಿ ಹಮ್ಮಿಕೊಂಡಿದ್ದ ಗುರುಸ್ಮತಿ ಕಾರ್ಯಕ್ರಮವನ್ನು ಡಿಡಿಪಿಐ ಎಚ್ .ಜಿ. ಮಿರ್ಜಿ ಉದ್ಘಾಟಿಸಿದರು. ನ್ಯಾಯವಾದಿ ಪ್ರಕಾಶ ವಸ್ತ್ರದ, ಐ.ಎಸ್. ಹಿರೇಮಠ, ರಾಧಾ ಪಾಟೀಲ, ಕಸಾಪ ತಾಲೂಕು ಅಧ್ಯಕ್ಷ ಆನಂದ ಪೂಜಾರಿ ಇದ್ದರು. 
ಜಿಲ್ಲೆ

ಗುರುವಿಗೆ ಸಮಾಜದಲ್ಲಿ ಮಹತ್ವದ ಸ್ಥಾನ

ಮುಧೋಳ: ಯಾವುದೇ ಕ್ಷೇತ್ರವಿರಲಿ ಅಲ್ಲಿ ಯಾವಾಗಲೂ ಗುರುವಿಗೆ ಮಹತ್ವದ ಸ್ಥಾನ ಇರುತ್ತದೆ. ಭಾರತೀಯ ಪರಂಪರೆಯಲ್ಲಿ ಗುರು-ಶಿಷ್ಯರ ಸಂಬಂಧ ಶ್ರೇಷ್ಠವಾಗಿದೆ ಎಂದು ಡಿಡಿಪಿಐ ಎಚ್.ಜಿ. ಮಿರ್ಜಿ ಹೇಳಿದರು.

ನಗರದ ಕಸಾಪ ಭವನದಲ್ಲಿ ಶುಕ್ರವಾರ ತಾಲೂಕಿನ ಮಂಟೂರ ಎಸ್‌ಎಂಎನ್ ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ 2007 ರಿಂದ 2010 ವರೆಗೆ ಡಿ.ಇಡಿ ಕಲಿತ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುಸ್ಮತಿ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚಾರ್ಯ ಆರ್.ಎನ್. ಮುದ್ನೂರ ಮಾತನಾಡಿ, 2007 ರಿಂದ 2011 ರ ವರೆಗೆ ನಮ್ಮ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿದ್ದರು. ಈಗ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಖುಷಿ ತಂದಿದೆ ಎಂದರು.

ನ್ಯಾಯವಾದಿ ಪ್ರಕಾಶ ವಸ್ತ್ರದ ಮಾತನಾಡಿದರು. ಐ.ಎಸ್. ಹಿರೇಮಠ, ರಾಧಾ ಪಾಟೀಲ, ಕಸಾಪ ತಾಲೂಕು ಅಧ್ಯಕ್ಷ ಆನಂದ ಪೂಜಾರಿ, ಸಚಿನ್ ಹಲಗಲಿ, ರವಿ ಮದರಖಂಡಿ, ರುದ್ರಪ್ಪ ಬೆಣ್ಣೂರ, ಎಂ.ವಿ. ಕರಡಿ, ಲಕ್ಷ್ಮಣ ಮದರಖಂಡಿ, ಸುರೇಶ ಬದನೂರ, ಡಾ. ಎಚ್.ಜಿ. ಹರ್ಷಾ, ವಿಠಲ ಚೌಡಾಪುರ, ಬಸವರಾಜ ಮಠಪತಿ, ಎಸ್.ಎಸ್. ಜಕನೂರ, ಯಮನಪ್ಪ ಅತ್ತಾಲಟ್ಟಿ, ಎಸ್.ಜಿ. ಮಲವಾಡಿ ಇದ್ದರು.