ಜಿಲ್ಲೆ

ಐತಿಹಾಸಿಕ ಬ್ರಹ್ಮಕಲಶಕ್ಕೆ ಜಗತ್ತನ್ನು ಬೆಸೆಯುವ ಕಾರ್ಯ

ಪಡುಬಿದ್ರಿ: ಕಾಪುವಿನ ಅಮ್ಮ ಜಗದ್ವಿಖ್ಯಾತಿ ಪಡೆದಿದ್ದಾಳೆ. ಜಗತ್ತಿನ ಮಾರಿ ದೂರಿಕರಿಸುವ ಕಾಪು ಅಮ್ಮನ ಆಲಯ ರಾಜಶ್ರಯ ಸ್ವರೂಪದಲ್ಲಿ ನಿರ್ಮಿಸುವ ಯೋಗ ಲಭಿಸಿದೆ. ದೇವಳ ಐತಿಹಾಸಿಕ ಬ್ರಹ್ಮಕಲಶಕ್ಕೆ ಜಗತ್ತನ್ನು ಬೆಸೆಯುವ ಕಾರ್ಯ ಇಲ್ಲಿನ ಭಕ್ತರಿಂದಾಗಿದೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಶ್ರೀ ಹೊಸಮರಿಗುಡಿ ದೇವಸ್ಥಾನ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದಾನಿಗಳನ್ನು ಗೌರವಿಸಲಾಯಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆನುವಂಶಿಕ ಅರ್ಚಕ ಅನಂತಕೃಷ್ಣ ಆಸ್ರಣ್ಣ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಹರೀಶ್ ಪೂಂಜ, ವೈ.ಭರತ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕಿಶೋರ್ ಬಿ.ಆರ್., ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಅದಾನಿ ಸಮೂಹ ಸಂಸ್ಥೆ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್ ಆಳ್ವ, ಮಹೇಶ್ ಕುಮಾರ್, ಮುಂಬೈ ಉದ್ಯಮಿ ಕೃಷ್ಣ ಶೆಟ್ಟಿ, ಜಾಗತಿಕ ಬಂಟರ ಸಂಘ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಿರ್ಡಿ ಸಾಯಿಬಾಬಾ ಮಂದಿರ ಬಿಪಿನ್ ದಾದಾ ಪುಲೆ, ಸಿಎ ಎಂ.ಬಿ.ಶೆಟ್ಟಿ ಮುಂಬೈ, ನಾಗಾನಂದ ವಾಸುದೇವ ಆಚಾರ್ಯ, ಯೋಗೀಶ್ ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಪಕಳ ಕಾರ್ಯಕ್ರಮ ನಿರೂಪಿಸಿದರು.

ಕಾಪುವಿಗೆ ಬಂದು ತಾಯಿ ದರ್ಶನ ಭಾಗ್ಯದಿಂದ ಮೂಕವಿಸ್ಮಿತನಾಗಿದ್ದೇನೆ. ಭವ್ಯ ಮಂದಿರ ನಿರ್ಮಾಣ ತಾಯಿ ಸಂಕಲ್ಪದಿಂದಾಗಿದೆ. ಇದು ವಿಸ್ಮಯವೇ ಆಗಿದೆ. ಧಾರ್ಮಿಕ ಶ್ರದ್ಧೆ ಹಾಗೂ ನಂಬಿಕೆ ಹಿಂದು ಧರ್ಮಕ್ಕೆ ಶಕ್ತಿ. ಧಾರ್ಮಿಕ ಶ್ರದ್ಧೆ ಪ್ರತಿರೂಪವಾಗಿ ಕಾಪುವಿನಲ್ಲಿ ಮಂದಿರ ನಿರ್ಮಾಣವಾಗಿದೆ. -ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ https://www.vijayavani.net/improper-waste-disposal https://www.vijayavani.net/brahmarathotsava-at-gangolli-temple