ಜಿಲ್ಲೆ

ತಮಿಳುನಾಡು ಮೂಲದ ಚಾಲಕ ನಾಪತ್ತೆ

ವೀರೇಶ ಸೌದ್ರಿ

ಅಂಕೋಲಾ: ತಮಿಳುನಾಡು ಮೂಲದ ಗ್ಯಾಸ್ ಟ್ಯಾಂಕರ್ ಚಾಲಕನೊಬ್ಬ ನಾಪತ್ತೆಯಾಗಿದ್ದಾನೆ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ತಮಿಳುನಾಡಿನ ಮಾರಿಯಮ್ಮನ್ ಕೊವಿಲ್ ನಿವಾಸಿ ಶರವಣನ್ ಷಣ್ಮುಗಮ್ (38) ನಾಪತ್ತೆಯಾಗಿದ್ದಾನೆ ಎಂದು ಈತನ ತಾಯಿ ಮೋಹನಾ ದೂರು ದಾಖಲಿಸಿದ್ದಾರೆ. ಮಂಗಳೂರಿನಲ್ಲಿ ಟ್ಯಾಂಕರ್ (ಕೆಎ-01/ಎಎಚ್-2166) ಚಾಲಕನಾಗಿ ಕೆಲಸ ಮಾಡುತ್ತಿದ್ದ. ಧಾರವಾಡದಲ್ಲಿ ಗ್ಯಾಸ್ ಖಾಲಿ ಮಾಡಿಕೊಂಡು ವಾಪಸು ಮಂಗಳೂರಿಗೆ ಹೋಗುವಾಗ ಜು.16ರಂದು ಬೆಳಗ್ಗೆ ಶಿರೂರು ಹತ್ತಿರ ಚಹಾ ಕುಡಿಯಲು ಟ್ಯಾಂಕರ್ ನಿಲ್ಲಿಸಿದ್ದ. ಗುಡ್ಡ ಕುಸಿತವಾದ ಸ್ಥಳದಲ್ಲಿ ಟ್ಯಾಂಕರ್ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.