ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ, ಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಹತ್ತಾರು ಟ್ಯಾಂಕರ್ಗಳ ಮೂಲಕ ರಾಸಾಯನಿಕಯುಕ್ತ ಕೈಗಾರಿಕಾ ತ್ಯಾಜ್ಯ ನೀರನ್ನು ಸುರಿದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ವಿಭಾವಿದ್ಯಾ ರಾಠೋಡ್, ಇನ್ಸ್ಪೆಕ್ಟರ್ ಗಣೇಶ್ ರಾವ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಹೊಸಹಳ್ಳಿ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ. ವಿಷಯುಕ್ತ ನೀರು ಕೆರೆಗೆ ಹರಿದುಹೋಗದಂತೆ ಸಕ್ಕಿಂಗ್ ಯಂತ್ರಗಳ ಮೂಲಕ ತ್ಯಾಜ್ಯ ನೀರನ್ನು ಹೊರಹಾಕಲಾಗಿದೆ.
ಅಪಾರ ವನ್ಯಸಂಕುಲ
ತಾಲೂಕಿನಲ್ಲೇ ಅತ್ಯಂತ ವಿಶಾಲ ಹಾಗೂ ಬೇಸಿಗೆ, ಮಳೆಗಾಲ ಎಲ್ಲ ಸಂದರ್ಭದಲ್ಲೂ ಗುಂಡಮಗೆರೆ ಕೆರೆಯಲ್ಲಿ ನೀರಿರುತ್ತದೆ. ಗುಂಡಮಗೆರೆ ಕರೆ ಸುತ್ತಲು ಮಾಕಳಿ ದುರ್ಗ, ಜಾಲಿಗೆ ಬೆಟ್ಟದ ಸಾಲು ಸೇರಿ ವಿಶಾಲ ಕುರುಚಲು ಅರಣ್ಯ ಪ್ರದೇಶವು ಇರುವುದರಿಂದ ಕೆರೆಯಿಂದ ಹರಿದು ಬರುವ ನೀರಿನ ಮೇಲೆ ಹತ್ತಾರು ಪ್ರಾಣಿ, ಪಗಳು ಅವಲಂಬಿಸಿವೆ.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತ&ಮುತ್ತಲಿನ ಗ್ರಾಮದ ಜನರು ಜಾಗೃತರಾಗಿರುವ ಹಾಗೂ ರಾತ್ರಿ ವೇಳೆ ಗ್ರಾಮದ ರೈತರು ಗಸ್ತು ತಿರುಗುವುದರಿಂದ ತ್ಯಾಜ್ಯ ನೀರು ವಿಲೇವಾರಿಗೆ ಕೈಗಾರಿಕೆ ಮಾಲೀಕರು ಗುಂಡಮಗೆರೆ ಅರಣ್ಯ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಈ ಪ್ರದೇಶದಲ್ಲಿ ಚಿರತೆ ಹಾಗೂ ಇತರ ಕಾಡು ಪ್ರಾಣಿಗಳ ಭಯವಿದ್ದು, ರಾತ್ರಿ ಜನ ಸಂಚಾರ ವಿರಳ. ಹೀಗಾಗಿಯೇ ಟ್ಯಾಂಕರ್ಗಳ ಮೂಲಕ ತ್ಯಾಜ್ಯ ನೀರನ್ನು ಇಲ್ಲಿಗೆ ತಂದು ಸುಲಭವಾಗಿ ಸುರಿದು ಹೋಗುತ್ತಿದ್ದಾರೆ ಎಂಬ ಶಂಕೆ ಇದೆ.