ಆಲಂಬಾಡಿಕಾವಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸ್ವಾಭಿಮಾನಿ ಬಣದ ನೂತನ ನಿರ್ದೇಶಕರು ತಾಪಂ ಸದಸ್ಯ ಎ.ಎಂ.ಸಂಜೀವಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು. 
ಜಿಲ್ಲೆ

ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ ಸ್ವಾಭಿಮಾನಿ ಬಳಗ

ಕೆ.ಆರ್.ಪೇಟೆ: ತಾಲೂಕಿನ ಆಲಂಬಾಡಿಕಾವಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಎಂ.ಸಂಜೀವಪ್ಪ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಅವರ ಸ್ವಾಭಿಮಾನಿ ಬಳಗದ 8 ಜನರು ಗೆಲುವು ಸಾಧಿಸಿದ್ದಾರೆ.

ಅಂತೆಯೇ ಸ್ವತಂತ್ರ ಅಭ್ಯರ್ಥಿಗಳಾದ ಎ.ರಾಜು, ಆಶಾ ದೇವರಾಜು, ಐಪನಹಳ್ಳಿ ಸುರೇಶ್, ಬಸವನಹಳ್ಳಿ ಬಿ.ಎಂ.ಕೀರ್ತಿ ಗೆಲುವು ಸಾಧಿಸಿದ್ದಾರೆ. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಎ.ಟಿ.ಕರಿಶೆಟ್ಟಿ, ಐಪನಹಳ್ಳಿ ಡಿ.ಸುರೇಶ್, ಗುಡುಗನಹಳ್ಳಿ ಸುದರ್ಶನ್, ಎಸ್.ರಾಜು, ಪಿ.ನಂಜುಂಡೇಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಗುಡುಗನಹಳ್ಳಿ ಜವರಮ್ಮ, ಆಶಾದೇವರಾಜು, ಬಿಸಿಎಂ ‘ಎ’ ಮೀಸಲು ಕ್ಷೇತ್ರದಿಂದ ಎಂ.ಮೋಹನ್, ಬಿಸಿಎಂ ‘ಬಿ’ ಮೀಸಲು ಕ್ಷೇತ್ರದಿಂದ ಬಸವನಹಳ್ಳಿ ಬಿ.ಎಂ.ಕೀರ್ತಿ, ಎಸ್ಸಿ ಮೀಸಲು ಕ್ಷೇತ್ರದಿಂದ ಬಸವನಹಳ್ಳಿ ಕೃಷ್ಣಯ್ಯ, ಎಸ್.ಟಿ.ಮೀಸಲು ಕ್ಷೇತ್ರದಿಂದ ಭಾಗ್ಯಮ್ಮ, ಸಾಲಗಾರರಲ್ಲದ ಕ್ಷೇತ್ರದಿಂದ ಎ.ರಾಜು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ವಾಸಿಂ ಪಾಷಾ ತಿಳಿಸಿದ್ದಾರೆ.

ನೂತನ ನಿರ್ದೇಶಕರನ್ನು ಶಾಸಕ ಎಚ್.ಟಿ.ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ತಾಲೂಕು ಪಂಚಾಯಿತಿ ಸದಸ್ಯ ಎ.ಎಂ.ಸಂಜೀವಪ್ಪ, ಜಿಪಂ ಮಾಜಿ ಸದಸ್ಯ ಬಿ.ನಾಗೇಂದ್ರಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದರು.

ಸ್ವಾಭಿಮಾನಿ ಬಣದ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಎಂ.ಸಂಜೀವಪ್ಪ, ಐದು ವರ್ಷಗಳ ಕಾಲ ಸಹಕಾರ ಸಂಘವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋದ ಕಾರಣ ನಮ್ಮ ಬಣದ 8 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಇದೇ ರೀತಿ ಮುಂಬರುವ ತಾಪಂ ಮತ್ತು ಜಿ.ಪಂ.ಚುನಾವಣೆಯಲ್ಲಿ ಗೆಲುವು ಸಾಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಸ್ವಾಭಿಮಾನಿ ಬಣಕ್ಕೆ 8ಸ್ಥಾನ ನೀಡಿರುವ ಮತದಾರರು ಹಾಗೂ ಸಹಕಾರಿ ಧುರೀಣರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.