ಜಿಲ್ಲೆ

ಧರ್ಮ ಸಂಸ್ಕೃತಿ-ಸಂಸ್ಕಾರದಿಂದ ಮನುಕುಲದ ಉಳಿವು

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನುಷ್ಯ ಧರ್ಮದಿಂದ ವಿಮುಖನಾಗಿ ಸಂಸತಿಯ ವಿಸತ ನೆಲೆ ಕಳೆದುಕೊಂಡು ಸಂಸ್ಕಾರ ರಹಿತನಾಗಿ ಬಾಳಿದರೆ ಬದುಕು ವಿಕಾಸದ ಬದಲು ವಿನಾಶದ ಹಾದಿ ಹಿಡಿಯುತ್ತದೆ. ಹೀಗಾಗಿ ಧರ್ಮ, ಸಂಸತಿ, ಸಂಸ್ಕಾರದಿಂದಲೇ ಮನುಕುಲ ಉಳಿದು ಬೆಳೆದು ಬರಲು ಸಾಧ್ಯ ಎಂಬುದನ್ನು ಯಾರೂ ಮರೆಯಬಾರದು ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಮಹಾದಾಸೋಹಿ ಕಲಬುಗಿರ್ ಶರಣಬಸವೇಶ್ವರರ ಪುರಾಣ ಪ್ರವಚನದ ಮಂಗಲ ಸಮಾರಂಭದ ನೇತೃತ್ವವಹಿಸಿ ಮಾತನಾಡಿದರು.
ಆರಂಭದಿಂದಲೂ ಭಾರತೀಯರು ನಮ್ಮ ನೆಲದ ಸಂಸತಿ, ಸಂಸ್ಕಾರಗಳೊಂದಿಗೆ ಬದುಕಿ ಆಧ್ಯಾತ್ಮದ ಅನುಸಂಧಾನದಲ್ಲಿ ಹಿರಿಮೆ ಸಾಧಿಸಿದ್ದಾರೆ. ಈ ನಿಟ್ಟಿನಲ್ಲಿ ಅಖಂಡ ವಿಶ್ವವೇ ಭಾರತದತ್ತ ಮುಖಮಾಡುವಂತಾಗಿದೆ. ಭಕ್ತ ಸಂಕುಲ ಶ್ರೇಷ್ಠತೆ ಸಾಧಿಸುವಲ್ಲಿ ಅವರು ಆಚಾರ್ಯರ, ಶರಣರ, ಸಂತ-ಮಹಾಂತರ ಆದರ್ಶದ ಬದುಕಿನ ಕ್ಷಣಗಳನ್ನು, ಮೌಲ್ಯ ತುಂಬಿದ ಮಾತುಗಳನ್ನು ಮೆಲುಕು ಹಾಕಿ ನಿತ್ಯದ ಜೀವನ ವಿಧಾನಕ್ಕೆ ಅಳವಡಿಸಿಕೊಳ್ಳುವಲ್ಲಿ ಪುರಾಣ ಪ್ರವಚನಗಳು ಬೆಳಕು ಚೆಲ್ಲುತ್ತವೆ. ಭಕ್ತಗಣದ ಶ್ರೇಯೋಭಿವೃದ್ಧಿಯೇ ಮಠಾಧೀಶರ ಧರ್ಮ ಜಾಗೃತಿ ಕೈಂಕರ್ಯದ ಬಹುಮುಖ್ಯ ಆಶಯವಾಗಿದೆ ಎಂದರು.
11 ದಿನಗಳ ಕಾಲ ಪುರಾಣ ಪ್ರವಚನ ನೀಡಿದ ಕಲಬುಗಿರ್ ಜಿಲ್ಲೆ ಸೂಗೂರು ರುದ್ರಮುನೀಶ್ವರ ಸಂಸ್ಥಾನ ಹಿರೇಮಠದ ಡಾ. ಚೆನ್ನರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗೆ ಭಕ್ತಗಣ ಗೌರವಿಸಿ ಗುರುಕಾಣಿಕೆ ಸರ್ಮಪಿಸಿದರು. ಇನಾಮಹೊಂಗಲ ವಿರಕ್ತಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ ಇದ್ದರು. ಅಮ್ಮಿನಭಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ನಗರದ ವೈದ್ಯ ಡಾ. ಸತೀಶ ಇರಕಲ್ಲ, ಬಳ್ಳೂರಿನ ಶಂಕರಗೌಡ ಫಕ್ಕೀರಗೌಡ್ರ, ಪ್ರಶಾಂತ ರಾಜಗುರು, ಚೆನ್ನಮ್ಮ ಮಡಿವಾಳರ ಅವರಿಗೆ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ವತಿಯಿಂದ ಗುರುರಕ್ಷೆ ಗೌರವ ನೀಡಿ ಆಶೀರ್ವದಿಸಲಾಯಿತು.
ವಿಜಯಾನಂದ ಇಟಗಿ ಸ್ವಾಗತಿಸಿದರು. ಗುರುಮೂತಿರ್ ಯರಗಂಬಳಿಮಠ ನಿರೂಪಿಸಿದರು.