ಜಿಲ್ಲೆ

ವಿವಾದಿತ ಜಾಗದ ಸರ್ವೇ ಸುಖಾಂತ್ಯ

ಮುಳಬಾಗಿಲು; ನಗರದ ಸರ್ವೇ ನಂ. 426ರ ಜಾಗದಲ್ಲಿನ ವಕ್ಫ್​ಬೋರ್ಡ್​ ಮತ್ತು ಹಿಂದುಗಳ ಸ್ಮಶಾನ ಜಾಗದ ಕುರಿತು ಹಲವು ದಿನಗಳಿಂದ ನಡೆಯುತ್ತಿದ್ದ ವಾದ&ವಿವಾದ ಹಿನ್ನೆಲೆಯಲ್ಲಿ ಶುಕ್ರವಾರ ಅಧಿಕಾರಿಗಳು ಎರಡೂ ಕಡೆಯವರ ನೇತೃತ್ವದಲ್ಲಿ ಕರೆದಿದ್ದ ಸರ್ವೇ ಕಾರ್ಯ ಸುಖಾಂತ್ಯವಾಗಿ ನಡೆಯಿತು.

ಸರ್ವೇಗೆ ಅಡ್ಡಿಯಾಗಿದ್ದ 10 ಎಕರೆ 36 ಗುಂಟೆ ಜಮೀನಿನಲ್ಲಿ ಗಿಡ&ಗಂಟಿಗಳನ್ನು ನಗರಸಭೆಯಿಂದ ತೆರವು ಮಾಡಿ, ಸರ್ವೇ ಕಾರ್ಯ ನಡೆಸಿದರು.

ಕರ್ನಾಟಕ ವಕ್ಫ್​ ಬೋರ್ಡ್​ಗೆ ಸೇರಿದ ಒಎಸ್​ ನಂ. 6/2012ರಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಾಬತ್ತು ಸ್ಥಳ ಪರಿಶೀಲನೆಗೆ ಮತ್ತು ಸರ್ವೇ ಮಾಡಲು ತಾಲೂಕಾಡಳಿತ ಸಿದ್ಧತೆ ಕೈಗೊಂಡಿತ್ತು. ಸರ್ವೇ ವೇಳೆ ಅಳೆಯುವಾಗ ಅನುಮಾನಾಸ್ಪದ ನಡವಳಿ ಕಂಡುಬಂದಿದ್ದಕ್ಕೆ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು. ನಗರಠಾಣೆ ಪೊಲೀಸರ ನೇತೃತ್ವದಲ್ಲಿ ಬಂದೋಬಸ್​ ಮಾಡಲಾಗಿತ್ತು, ಮಾಧ್ಯಮ ಪ್ರತಿನಿಧಿಗಳು ಸೇರಿ ನೋಟಿಸ್​ ದಾರರಿಗೂ ಪ್ರವೇಶ ರ್ನಿಬಂಧ ಮಾಡಿದ್ದರು.

ಸದರಿ ಜಮೀನು ಮುಳಬಾಗಿಲು ನಗರದ ಗುಣಿಗಂಟಿಪಾಳ್ಯ, ತೋಟ್ಲಪಾಳ್ಯದ ಹಿಂದುಗಳು ವಿಶೇಷವಾಗಿ ಬಲಿಜ ಸಮುದಾಯದ ಸ್ಮಶಾನವಾಗಿದ್ದು, ಅವರ ಪೂರ್ವಜರ ಸಮಾಧಿಗಳು ಕಂಡು ಬಂದವು. ಭೂ ದಾಖಲೆ ಇಲಾಖೆಯ ಸಹಾಯಕ ನಿರ್ದೇಶಕಿ ನಿವೇದಿತಾ ಅವರು ಸದರಿ ಸರ್ವೇ ಕುರಿತು ಪ್ರತಿವಾದಿಗಳಾದ 21 ಹಿಂದುಗಳು, ಹಜರತ್​ ಜಲೀಲ್​, ವಕ್ಫ್​ ಬೋರ್ಡ್​ ಸೇರಿ 13 ಮುಸ್ಲಿಮರಿಗೆ ನೋಟಿಸ್​ ಜಾರಿ ಮಾಡಿದ್ದರು. ಆದರೆ ಸರ್ವೇ ವೇಳೆ ನೋಟಿಸ್​ ದಾರರಿಗೂ ಪೊಲೀಸರು ಒಳಗೆ ಬಿಟ್ಟಿಲ್ಲ ಎಂಬ ಆರೋಪ ಕೇಳಿಬಂದಿತು.

ಭೂ ದಾಖಲೆ ಇಲಾಖೆಯ ಸಹಾಯಕ ನಿರ್ದೇಶಕಿ ನಿವೇದಿತಾ ಅವರು ಮುಳಬಾಗಿಲು ಗ್ರಾಮದ ಸ. ನಂ.426ರ ವಿವಾದ ಬಗ್ಗೆ ಶುಕ್ರವಾರ ಸ್ಥಳ ಪರಿಶೀಲನೆ ಮಾಡಿದ್ದು, ಸರ್ವೇ ಕಾರ್ಯ ಮುಗಿಸಿದ್ದು, ಅಗತ್ಯ ದಾಖಲೆಗಳನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು.

- ವಿ. ಗೀತಾ

ತಹಸೀಲ್ದಾರ್​, ಮುಳಬಾಗಿಲು

10 ಎಕರೆ 36 ಗುಂಟೆ ಜಮೀನ ಗಡಿ ಗುರುತಿಸಲಾಗಿದೆ. ಜತೆಗೆ ಅದರಲ್ಲಿರುವ ಎಲ್ಲ ಸಮಗ್ರ ಮಾಹಿತಿ 2 ರಿಂದ 3 ದಿನಗಳಲ್ಲಿ ಸಂಗ್ರಹಿಸಿ ವರದಿ ತಯಾರಿಸಿ ತಾಲೂಕು ಆಡಳಿತಕ್ಕೆ ಸಲ್ಲಿಸಲಾಗುವುದು.

- ನಿವೇದಿತಾ

ಭೂ ದಾಖಲೆ ಇಲಾಖೆಯ ಸಹಾಯಕ ನಿರ್ದೇಶಕಿ, ಮುಳಬಾಗಿಲು