ಜಿಲ್ಲೆ

ಒಬಿಸಿ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು

Davangere - Prakash Arali

ಚನ್ನಗಿರಿ: ಕೇಂದ್ರ ಸರ್ಕಾರ ನಮ್ಮ ಲಿಂಗಾಯಿತ ಧರ್ಮಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡಿ ಒಬಿಸಿ ಮೀಸಲಾತಿ ನೀಡುವವರೆಗೂ ನಮ್ಮ ಹೊರಾಟ ನಿಲ್ಲುವುದಿಲ್ಲ ಎಂದು ಪಾಂಡೋಮಟ್ಟಿ ಡಾ. ಗುರುಬಸವ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಚಿಕ್ಕೂಲಿಕೆರೆ ವಡ್ನಾಳ್ ಮಲ್ಲೇಶಪ್ಪ ಅವರ ಮನೆಯ ಅಂಗಳದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದಿಂದ ಶ್ರಾವಣ ಬಂತು ಅನುಭಾವ ತಂತು ಕಾರ್ಯಕ್ರಮದ ಸಮರೋಪ ಸಮಾರಂಭ ಉದ್ಘಾಟಿಸಿ ಬುಧವಾರ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಜಾಗತಿಕ ಲಿಂಗಾಯತ ವೇದಿಕೆ ಲಿಂಗಾಯತ ಸಂಸ್ಕೃತಿ ಬೆಳೆಸಲು ಗ್ರಾಮೀಣ ಮಟ್ಟದಿಂದ ಧಾರ್ಮಿಕ ಜಾಗೃತಿ ಸಭೆಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು.
ಬಸವಣ್ಣನವರ ತತ್ವದ ಲಿಂಗಾಯತ ಧರ್ಮದಲ್ಲಿ ನಾವುಗಳು ಬದ್ಧತೆಯಿಂದ ಜೀವನ ಮಾಡಿ ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ನೆಲೆ ಕಂಡುಕೊಂಡಿದ್ದೇವೆ. ಇಲ್ಲಿ ಮೌಢ್ಯತೆಗೆ ಅಸ್ಪದವಿಲ್ಲ, ಹೀಗಾಗಿ ಬಸವಣ್ಣರವರ ಮಾರ್ಗದಂತೆ ಶ್ರಮ ಸಂಸ್ಕೃತಿಯಲ್ಲಿ ನಾವು ಸಾಗಬೇಕಿದೆ ಎಂದರು.
ಶರಣ ಶಿವಕುಮಾರಸ್ವಾಮಿ ಕುರ್ಕಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಡ್ನಾಳ್ ಆಶೋಕ್, ವಡ್ನಾಳ್ ಮಲ್ಲೇಶಪ್ಪ, ಹರೋನಳ್ಳಿ ಬಸರಾಜಪ್ಪ, ತೂಮ್‌ಕೋಸ್ ಅಧ್ಯಕ್ಷ ಅರ್.ಎಂ.ರವಿ, ಮಾಜಿ ಅಧ್ಯಕ್ಷ ಎಸ್.ಎಚ್.ಶಿವಕುಮಾರ್, ವಡ್ನಾಳ್ ಆಶೋಕ್, ವಡ್ನಾಳ್ ಜಗದೀಶ್, ನಲ್ಕುದುರೆ ಶಶಿಕಲಾ ಮೂರ್ತಿ, ಮಲ್ಲಿಕಾರ್ಜುನಪ್ಪ, ತಾಲೂಕು ಅಧ್ಯಕ್ಷ ಎಂ.ರಾಜಪ್ಪ ಇದ್ದರು.