ಜಿಲ್ಲೆ

ಬೆಳೆ ಹಾನಿ ಪರಿಹಾರ ನೀಡುವವರೆಗೂ ಧರಣಿ ನಿಲ್ಲದು

ಬಸವರಾಜ ವೀರಪ್ಪ ಗರಗ

ಅಣ್ಣಿಗೇರಿ: ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಬಿಡುಗಡೆ ಮಾಡುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಸಂಘದ ನವಲಗುಂದ ತಾಲೂಕಾಧ್ಯಕ್ಷ ಲೋಕನಾಥ ಹೆಬಸೂರ ಎಚ್ಚರಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ತಾಲೂಕಿನ ರೈತರು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಆರನೇ ದಿನಕ್ಕೆ ಕಾಲಿಟ್ಟಿದ್ದು, ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು ಎಂದು ತಹಸೀಲ್ದಾರ್ ಮಂಜುನಾಥ ದಾಸಪ್ಪನವರಗೆ ರೈತರ ಪರವಾಗಿ ಮನವಿ ಸಲ್ಲಿಸಿ ಮಾತನಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ವಾರದೊಳಗಾಗಿ ಬೆಳೆ ಹಾನಿ ಜಮೆ ಆಗುವ ನಿರೀಕ್ಷೆ ಇದೆ ಎಂದು ಭರವಸೆ ನೀಡಿದರು. ಅಣ್ಣಿಗೇರಿ ತಾಲೂಕು ರೈತ ಸಂಘಟನೆ ಅಧ್ಯಕ್ಷ ಜಯರಾಜ ಹೂಗಾರ, ನಿಂಗಪ್ಪ ಬಡ್ಡೆಪ್ಪನವರ, ಗುರುಸಿದ್ದಪ್ಪ ಕೊಪ್ಪದ, ಶಿವಕುಮಾರ ಬಳಿಗಾರ ಹಾಗೂ ಇತರರು ಮಾತನಾಡಿ, ರೈತರಿಗೆ ಪರಿಹಾರ ಸಿಗುವತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.

ಅರ್ಜುನ್ ಕಲಾಲ, ಬಸಪ್ಪ ಕರ್ಲವಾಡ, ದಾವಲಸಾಬ್ ವಿರೂಪಾಕ್ಷಪ್ಪ ಬಣಗಾರ, ಡಿ.ಎಲ್. ಆಡಕಾವು, ರೈತ ಮುಖಂಡರಾದ ಭಗವಂತಪ್ಪ ಪುಟ್ಟಣ್ಣವರ, ಶೇಖಣ್ಣ ಸೊಟಕನಾಳ, ಗುರುಸಿದ್ದಪ್ಪ ಕೊಪ್ಪದ, ಹನಮಂತಪ್ಪ ಕಂಬಳಿ, ಅರ್ಜುನ ಕಲಾಲ, ಭರತೇಶ ಜೈನ ಇತರರಿದ್ದರು.