The strike started again by the village administration officials 
ಜಿಲ್ಲೆ

ಗ್ರಾಮ ಆಡಳಿತ ಅಧಿಕಾರಿಗಳಿಂದ ಮತ್ತೆ ಮುಷ್ಕರ ಆರಂಭ

Vijayapura - Desk - Doddanagouda Gudihindin

ಗುಳೇದಗುಡ್ಡ: ಈ ಹಿಂದೆ ಮುಷ್ಕರ ನಡೆಸಿ ಸರ್ಕಾರಕ್ಕೆ ಸಲ್ಲಿಸಲಾದ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಆಡಳಿತ ಸಿಬ್ಬಂದಿ ಎರಡನೇ ಹಂತದ ಅನಿರ್ಧಿಷ್ಠಾವದಿ ಮುಷ್ಕರವನ್ನು ಸೋಮವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಪ್ರಾರಂಭಿಸಿದರು.

ಗ್ರಾಮಾಡಳಿತ ಅಧಿಕಾರಿಗಳಿಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸುವುದು, ಸುಸಜ್ಜಿತ ಕಚೇರಿ, ೋನ್, ಲ್ಯಾಪ್‌ಟಾಪ್, ಮುದ್ರಣ ಯಂತ್ರ ಮತ್ತಿತರ ಸೌಲಭ್ಯ ಒದಗಿಸಬೇಕು. ಕರ್ತವ್ಯ ನಿರ್ವಹಿಸುವಾಗ ಜೀವಹಾನಿಯಾದ ಸಿಬ್ಬಂದಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಆರಂಭಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಹಾಗುಂಡಯ್ಯ ಗುಡಿಸಾಗರ ಹೇಳಿದ್ದಾರೆ.

ಸತ್ಯಾಗ್ರಹದಲ್ಲಿ ಪಿ.ಪಿ. ತಳವಾರ, ವಿಜಯ ರೋಣದ, ಪ್ರಶಾಂತ ಹೊನ್ನಳ್ಳಿ, ಎ.ಎಚ್. ಮುಲ್ಲಾ ಎಚ್.ಡಿ. ಭಗವತಿ, ಎಂ.ಬಿ. ಮುಜಾವರ, ಎಸ್.ಜಿ. ಸರೂರ, ಅನುಷಾ ಪಾಟೀಲ, ಭಾಗ್ಯಾ ಹುನಕುಂಟಿ ಮತ್ತಿತರರು ಇದ್ದರು.