ಜಿಲ್ಲೆ

ವೈಭವ ಸಾರುತ್ತಿವೆ ಶಿಲಾಮೂರ್ತಿಗಳು

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿನ ತಹಸಿಲ್ ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಡಾ. ರವೀಂದ್ರ ಆಚಾರ್ಯ ಮಾತನಾಡಿ, ಜಕಣಚಾರಿ ಅವರು ಕೆತ್ತಿದ ಶಿಲಾಮೂರ್ತಿಗಳು, ದೇವಸ್ಥಾನಗಳು ಇತಿಹಾಸವನ್ನು ಹೇಳುತ್ತಿವೆ. ಅವರ ತ್ಯಾಗದ ಫಲವೇ ಈ ಸ್ಥಳಗಳಲ್ಲೇ ಐತಿಹಾಸಿಕ, ಧಾರ್ಮಿಕ ಕೇಂದ್ರಗಳಾಗಿವೆ. ನಮ್ಮ ನಾಡಿನ ವೈಭವನ್ನು ಅವುಗಳೆಲ್ಲವೂ ಸಾರಿ ಹೇಳುತ್ತಿವೆ ಎಂದು ಉಪನ್ಯಾಸ ನೀಡಿದರು.
ಇದೇ ವೇಳೆ ಸಮಾಜದ ಸಾಧಕರನ್ನು ಗೌರವಿಸಲಾಯಿತು.
ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ, ಉಪ ತಹಸೀಲ್ದಾರ ಜಿ.ವಿ. ಪಾಟೀಲ, ಮುಖಂಡರಾದ ಗಿರೀಶ ಬಡಿಗೇರ, ವಿನೋದ ಬಡಿಗೇರ, ಬಲಭೀಮ ಪೋದ್ದಾರ, ರವಿ ಕಮ್ಮಾರ, ಪರಮೇಶ ಬಡಿಗೇರ, ಶ್ಯಾಮ ಕಮ್ಮಾರ, ಗಂಗಾಧರ ಬಡಿಗೇರ, ಮೌನೇಶ ಬಡಿಗೇರ ಇತರರು ಇದ್ದರು.