ಆನೇಕಲ್ : ಪ್ರಸಿದ್ಧ ಪ್ರವಾಸಿ ತಾಣ ಬನ್ನೇರುಟ್ಟ ಜೈವಿಕ ಉದ್ಯಾನವನದ ಸುತ್ತಮುತ್ತ ಸ್ವಚ್ಛತೆ ಕಣ್ಮರೆಯಾಗಿ ಕಸವೇ ಮುಖಕ್ಕೆ ರಾಚುತ್ತಿದ್ದು, ಪ್ರವಾಸಿಗರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿಗೆ ಹೊಂದಿಕೊಂಡಿರುವ ಬನ್ನೇರುಟ್ಟ ಜೈವಿಕ ಉದ್ಯಾನವನದ ಸುತ್ತಮುತ್ತ ಹಾಗೂ ದೇವಾಲಯಗಳ ಅಕ್ಕಪಕ್ಕದ ಬಂಡೆಗಳಲ್ಲಿ ತ್ಯಾಜ್ಯ ಸುರಿಯಲಾಗುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪಾರ್ಕ್ ಸುತ್ತಮುತ್ತ ಗಬ್ಬುನಾರುತ್ತಿದೆ. ಅಲ್ಲದೆ ಜೈವಿಕ ಉದ್ಯಾನ ಮತ್ತು ಐತಿಹಾಸಿಕ ಚಂಪಕಧಾಮಸ್ವಾಮಿ ದೇವಸ್ಥಾನವೀಗ ಕಸದ ಡಂಪಿಂಗ್ ಯಾರ್ಡ್ ಆಗಿ ಬದಲಾಗುತ್ತಿದೆ. ಉದ್ಯಾನವನಕ್ಕೆ ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಬನ್ನೇರುಟ್ಟ ಸರ್ಕಲ್ಗೆ ಬರುವ ಮುನ್ನ ಕೊಳೆತ ತ್ಯಾಜ್ಯದ ದುರ್ನಾತದಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಂಕ್ರಾಮಿಕ ಭೀತಿ: ಈ ಭಾಗದ ಕಲ್ಲುಕ್ವಾರಿಗಳಲ್ಲಿ ಕಸದರಾಶಿ ತುಂಬಿ ತುಳುಕುತ್ತಿದ್ದು, ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ಸ್ಥಳಿಯರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಶುರುವಾಗಿದೆ.
ಸಿಲಿಕಾನ್ ಸಿಟಿ ತ್ಯಾಜ್ಯ : ಗ್ರಾಪಂಗೆ ಕೂಗಳತೆ ದೂರದಲ್ಲಿರುವ ಹಾಗೂ ಬನ್ನೇರುಟ್ಟ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಕೆಂಪನಾಯಕನಹಳ್ಳಿ ಬಂಡೆ ಕ್ವಾರಿಯಲ್ಲಿ ಹಾಗೂ ಬನ್ನೇರುಟ್ಟ ಮೂಲಕ ಕನಕಪುರಕ್ಕೆ ಹೋಗುವ ರಸ್ತೆ ಅಕ್ಕ ಪಕ್ಕದಲ್ಲಿ ರಾತ್ರೋರಾತ್ರಿ ಕಸದ ಲಾರಿಗಳಲ್ಲಿ ಸಿಲಿಕಾನ್ ಸಿಟಿಯ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಪರಿಸರ ಪ್ರೇಮಿಗಳು ಹಾಗೂ ಸ್ಥಳಿಯರು ದೂರು ನೀಡಿದರೂ ಇದುವರೆಗೆ ಯಾವುದೇ ಕ್ರಮವಾಗಿಲ್ಲ.
ಬನ್ನೇರುಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಚಂಪಕಧಾಮಸ್ವಾಮಿ ದೇವಾಲಯ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕಾದ ಜವಾಬ್ದಾರಿ ಗ್ರಾಪಂದು. ಹಲವು ಬಾರಿ ಈ ಬಗ್ಗೆ ಗ್ರಾಪಂಗೆ ಮನವಿ ಮಾಡಿದರೂ ಅಧಿಕಾರಿಗಳು ರ್ನಿಲಕ್ಷ$್ಯ ತೋರುತ್ತಿದ್ದಾರೆ. | ಮಧುಮತಿ ಪ್ರವಾಸಿ ಕ್ವಾರಿಯಲ್ಲಿ ತ್ಯಾಜ್ಯ ಸುರಿಯುವುದು ನನ್ನ ಗಮನಕ್ಕೆ ಬಂದಿದೆ. ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಕೇಸು ದಾಖಲು ಮಾಡುವಂತೆ ಕಂದಾಯ ನಿರೀಕರಿಗೆ ಸೂಚಿಸಲಾಗಿದೆ. | ಮಮತಾ ಪಿಡಿಒ, ಬನ್ನೇರುಟ್ಟ ಗ್ರಾಪಂ