ರಾಯಚೂರು ಧರ್ಮದ ಆಧಾರದ ಮೇಲೆ ಮೀಸಲು ಹಂಚಿಕೆಯಿಲ್ಲ, ಜಾತಿ ಗಣತಿಯಲ್ಲ ಎಂದು ಹೇಳುತ್ತಲೇ ಒಂದು ಧರ್ಮದ ಉಪ ಜಾತಿಗಳನ್ನು ಪರಿಗಣಿಸದೇ ಧರ್ಮ ಕಾಲಂನಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಆದರೆ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಸಮಾಜದ ಒಡೆಯುವ ಕೆಲಸ ಮಾಡುತ್ತಿದೆಂದು ಆರ್ಯವೈಷ್ಯ ಮಹಾಸಭಾ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಧರ್ಮದಲ್ಲಿ ಮಾತ್ರ ಬೇರೆ ಬೇರೆ ಧರ್ಮ, ಉಪಜಾತಿಗಳನ್ನು ಸೇರ್ಪಡೆ ಮಾಡಿರುವದು ಧರ್ಮ ಒಡೆಯುವಕೆಲಸವಾಗಿದೆ. ಜಾತಿ ಗಣತಿಗೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲದೇ ಇದ್ದರೂ ಜಾತಿ, ಧರ್ಮದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹೈಕೋರ್ಟ್ ಸೂಚನೆ ಮೇರೆಗೆ ಕುಟುಂಬ ಮಾಹಿತಿ ಗುಪ್ತ ಹೇಗೆ ರಕ್ಷಿಸುತ್ತದೆ ಎಂದು ಪ್ರಶ್ನಿಸಿದರು.
ಬೆಂಗಳೂರು, ಮೈಸೂರುಗಳಂತೆ ನಗರಗಳಲ್ಲಿ ಜನರು ಬೆಳಗ್ಗೆ ಎದ್ದರೆ ಕೆಲಸಕ್ಕೆ ಹೋಗುತ್ತಾರೆ. ಮನೆಗಳಲ್ಲಿ ವೃದ್ದರು ಮಾತ್ರ ಲಭ್ಯವಾಗುತ್ತಾರೆ. ಅವರೆಲ್ಲರೂ ಗಣತಿಯಲ್ಲಿ ಭಾಗವಹಿಸುವದೇಹಿಗೆ ಸಾಧ್ಯ. ಉಪ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ ಇವರೇ ಗಣತಿಯ ಮಾಹಿತಿ ಸಂಗ್ರಹ ವಿರೋಧಿಸಿದ್ದಾರೆ. ಕೇಂದ್ರವೂ ಜಾತಿಗಣತಿ ಮಾಡುವದಾಗಿ ಹೇಳುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ಗಣತಿ ನಡೆಸಬಹುದಿತ್ತು. ಆದರೆ ರಾಜ್ಯ ಸರ್ಕಾರದ ಆಸಕ್ತಿಯೇ ಬೇರೆಯಾಗಿದೆ ಎಂದರು.
ಆರ್ಯವೈಶ್ಯ ಮಹಾಸಭಾ ಸಮಾಜದದೊಂದಿಗೆ ಇತರೆ ಸಮುದಾಯಗಳ ಅಭಿವೃದ್ಧಿಗೂ ತೊಡಗಿಸಿಕೊಂಡಿದೆ. ಶೀಘ್ರದಲ್ಲಿ ರಾಯಚೂರು ಮತ್ತು ಹುಬ್ಬಳ್ಳಿಗಳಲ್ಲಿ ವಸತಿ ನಿಲಯಗಳ ಸ್ಥಾಪನೆಗೆ ಒತ್ತು ನೀಡಲಿದೆ. ನೂರು ವರ್ಷಗಳ ಇತಿಹಾಸ ಪರ ಹೊಂದಿರುವ ಮಹಾಸಭಾ ಶೈಕ್ಷಣಿಕ ಅಭಿವೃದ್ಧಿ ವಿಶೇಷ ಕಾರ್ಯಕ್ರಮಗಳನ್ನೂ ರೂಪಿಸಿದೆ. ವೃತ್ತಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುವ ಯೋಜನೆಯಡಿ 200 ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ. ಶೇ.25 ರಷ್ಟು ಬೇರೆ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ನೀಡಲಾಗಿದೆ ಎಂದರು.
ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ರಸಾದ, ಮಹಾಸಭಾ ಹಿರಿಯ ಉಪಾಧ್ಯಕ್ಷ ಕುಂಟ್ನಾಳ ವೆಂಕಟೇಶ, ಜಗದೀಶ ಗುಪ್ತಾ, ದೇವನಪಲ್ಲಿ ವಾಸುದೇವ, ಕೆ.ಸಿ.ವೀರೇಶ, ರಾಘವೇಂದ್ರ, ಎಚ್.ಜಿ.ಹನುಮಂತಯ್ಯ ಇದ್ದರು.