ರಾಯಚೂರು ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ವರ್ಗೀಕರಣದಲ್ಲಿ ಸುಪ್ರಿಂಕೋರ್ಟ್ ಆದೇಶಗಳನ್ನು ಉಲ್ಲಂಘನೆ ಮಾಡುತ್ತಿದೆಂದು ಡಾ.ಅಂಬೇಡ್ಕರ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿ ವರ್ಗೀಕರಣಕೆ ಪಂಜಾಬ್ ಮತ್ತು ದಾವೀಂದರ ಸಿಂಗ್ ಪ್ರಕರಣದ ೨೦೨೪ ನವಂಬರ್ ೭ ರಂದು ಪ್ರಕಟಿಸಿರುವ ತೀರ್ಪು ಇನ್ನೂ ಬಾಕಿಯಿದೆ.
ಒಳಮೀಸಲು ಹಂಚಿಕೆ ರಾಜ್ಯಗಳಿಗೆ ಅಽಕಾರ ನೀಡುವದ ಜತೆಗೆ ಕೆನೆಪದರ ಅನುಸರಿಸುವಂತೆಯೂ ಸೂಚಿಸಿದೆ. ಆದರೆ ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವ ಏಕ ಸದಸ್ಯ ಆಯೋಗ ರಚಿಸಿ ವರದಿ ಪಡೆದಿದೆ. ಹಿಂದಿನ ಸರ್ಕಾರದ ಅವಽಯಲ್ಲಿ ಎಸ್ಸಿ ಸಂಬAಽತ ಜಾತಿಗಳಿಗೆ ಶೇ.೧೭ ಮತ್ತು ಪರಿಶಿಷ್ಟ ಪಂಗಡ ಸಂಬAಽತ ಜಾತಿಗಳಿಗೆ ಶೇ.೭ ಮೀಸಲು ಹೆಚ್ಚಿಸಿ ಆದೇಶಿಸಿರುವದು ಸರ್ವೋಚ್ಚ ನ್ಯಾಯಾಲಯದ ೯ ಜನ ನ್ಯಾಯಾಮೂರ್ತಿಗಳ ಪೀಠ ನೀಡಿದ್ದ ಇಂದ್ರ ಸಹಾನಿ ಪ್ರಕರಣದ ಉಲ್ಲಂಘನೆಯಾದAತಾಗಿದೆ.
ಶೇ.೫೦ ಮೀಸಲು ಬದಲು ಶೇ.೫೬ ರಷ್ಟು ಮೀಸಲು ನಿಗಽಯಾದಂತಾಗಿದೆ. ಶೈಕ್ಷಣಿಕ ಮತ್ತು ಉದ್ಯೋಗ ಮೀಸಲು ಕುರಿತಾಗಿ ಉಚ್ಚ ನ್ಯಾಯಾಲಯದಲ್ಲಿ ಮೀಸಲು ಹೆಚ್ಚಿಸಿರುವ ಕುರಿತು ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಲಾಗಿದೆ. ಉಚ್ಚ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ೨೦೨೫ ಅಗಷ್ಟ ೧೩ ರಂದು ಮೀಸಲು ಹೆಚ್ಚಳಕ್ಕೆ ಸಂಬAಽಸಿದAತೆ ಮಾಹಿತಿ ನೀಡಲು ಸೂಚಿಸಿದೆ ಎಂದರು.
ಒಳ ಮೀಸಲು ಜಾರಿಗೆ ಕೆನೆಪದರು ಜಾರಿಗೊಳಿಸಿ ಒಮ್ಮೇ ಮೀಸಲು ಪಡೆದವರಿಗೆ ಮತ್ತೊಮ್ಮೆ ಮೀಸಲು ಪಡೆಯಲು ನಿರ್ಭಂಽಸಬೇಕಿದೆ. ಬೌದ್ದ ಮತ್ತು ಕ್ರೆÊಸ್ತಧರ್ಮ ಆಚರಿಸುವವರಿಗೆ ಮೀಸಲಾತಿ ನೀಡದೇ ರದ್ದುಗೊಳಿಸಬೇಕು. ಅಲ್ಲದೇ ಮತ್ತೊಂದು ಪ್ರಕರಣದಲ್ಲಿ ಸ್ಪಶ್ಯ ಜಾತಿಗಳಾದ ಲಂಬಾಣಿ, ಭೋವಿ, ಕೊರಚ, ಕೊರಮ ಸಮೂದಾಯಗಳನ್ನು ಎಸ್ಸಿಪಟ್ಟಿಯಿಂದ ತೆಗೆಯಲು ಸಲ್ಲಿಸಿದ್ದ ಅರ್ಜಿ ವಿಚಾರಣೆ ಬಾಕಿಯಿದೆ.
ಕಾನೂನಾತ್ಮಕ ಸಮಸ್ಯೆಗಳಿರುವಾಗ ನ್ಯಾಯಮೂರ್ತಿ ನಾಗಮೋಹನದಾಸ ಆಯೋಗದ ವರದಿ ಜಾರಿಗೊಳಿಸುವದು ಸುಪ್ರಿಂಕೋರ್ಟನ ಆದೇಶ ಉಲ್ಲಂಘನೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಹುಸೇನಭಾಷ, ನರಸಿಂಹಲು ಪೋತಗಲ್ ಇದ್ದರು.