ಜಿಲ್ಲೆ

20 ಲಕ್ಷ ಉದ್ಯೋಗ ಸೃಷ್ಟಿ: 5 ಲಕ್ಷ ಕೋಟಿ ರೂ. ಬಂಡವಾಳ ಗುರಿ, ಕನ್ನಡಿಗರಿಗೆ ಡಿ ಗ್ರೂಪ್ ಹುದ್ದೆ

ಬೆಂಗಳೂರು: ಕರೊನಾ ಸಂಕಷ್ಟದ ಸಂದರ್ಭದಲ್ಲಿ ಯುವ ಸಮುದಾಯಕ್ಕೆ ಉದ್ಯೋಗ ಅವಕಾಶ ಹೆಚ್ಚಿಸುವ ಜತೆಗೆ ರಾಜ್ಯದ ಅಭಿವೃದ್ಧಿಗೆ ಬಂಡವಾಳ ಆಕರ್ಷಿಸುವ ಮಹತ್ವಾಕಾಂಕ್ಷೆಯಿಂದ ರಾಜ್ಯ ಸರ್ಕಾರ ನೂತನ ಕೈಗಾರಿಕಾ ನೀತಿ ಪ್ರಕಟಿಸಿದೆ.

5 ಲಕ್ಷ ಕೋಟಿ ರೂ. ಬಂಡವಾಳ ಆಕರ್ಷಣೆ, 20 ಲಕ್ಷ ಉದ್ಯೋಗಾವಕಾಶ ಸೃಷ್ಟಿ ಹಾಗೂ ಕೈಗಾರಿಕೆಯಲ್ಲಿ ಹಿಂದುಳಿದಿರುವ ಜಿಲ್ಲೆಗಳ ಅಭಿವೃದ್ಧಿಗೆ ಅನುವು ಮಾಡಿಕೊಡುವ ಉದ್ದೇಶವನ್ನು ನೂತನ ನೀತಿ ಒಳಗೊಂಡಿದೆ. ಬಿ.ಎಸ್.ಯಡಿಯೂರಪ್ಪ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲೇ 2020-2025ರ ಅವಧಿಯ ಈ ಕೈಗಾರಿಕಾ ನೀತಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

2014ನೇ ಸಾಲಿನಲ್ಲಿ ಹಿಂದಿನ ಸರ್ಕಾರ ಕೈಗಾರಿಕಾ ನೀತಿ ತಂದಿತ್ತು. ತದನಂತರ ಅನೇಕ ಬದಲಾವಣೆಗಳಾಗಿವೆ. ಉತ್ಪಾದನೆ ಮತ್ತು ಉತ್ಪಾದನಾ ಸಂಬಂಧಿತ ಸೇವಾ ಕೈಗಾರಿಕೆಗಳು, ಸ್ಮಾರ್ಟ್ ಉತ್ಪಾದನೆ, ಗ್ರಾಹಕೀಕರಣ, ಸಹಕಾರತ್ವದ ಉತ್ಪಾದನೆ ಇತ್ಯಾದಿ ಬೆಳವಣಿಗೆಗಳನ್ನು ಒಳಗೊಂಡಂತೆ ಹೊಸ ಅವಕಾಶಗಳು ಹೊರಹೊಮ್ಮಿವೆ. ಕೈಗಾರಿಕೀಕರಣಕ್ಕೆ ಪರಿಸರವನ್ನು ಶಕ್ತಗೊಳಿಸುವುದು, ಮೂಲಸೌಕರ್ಯಗಳ ಅಭಿವೃದ್ಧಿ, ರಾಜ್ಯದ ಜನರಿಗೆ ವಿಶೇಷವಾಗಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಹಾಗೂ ಟೈರ್-2 ಮತ್ತು ಟೈರ್-3 ನಗರಗಳಲ್ಲಿ ಸಮಾನ ಅವಕಾಶ ಒದಗಿಸುವುದು ಹಾಗೂ ಬಂಡವಾಳ ಹೂಡಿಕೆಯ ಅಭಿವೃದ್ಧಿಯನ್ನು ರಾಜ್ಯದಲ್ಲಿ ಖಾತರಿಪಡಿಸುವುದು ನೀತಿಯ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.

ಬೃಹತ್ ಯೋಜನೆ ಅಭಿವೃದ್ಧಿ

ರಾಜ್ಯವನ್ನು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜಿಸುವುದು, ಮೂಲಸೌಲಭ್ಯ ಬೆಂಬಲಿಸಲು ಕೆಐಎಡಿಬಿ ತನ್ನ ಕೈಗಾರಿಕಾ ಪ್ರದೇಶಗಳಲ್ಲಿ ಶೇ. 70 ಜಮೀನನ್ನು ಮೀಸಲಿಡುವುದು ಸರ್ಕಾರದ ಉದ್ದೇಶವಾಗಿದೆ.

* ಕರೊನಾ ನಂತರ ಹೊಸ ಅವಕಾಶ ಗಮನದಲ್ಲಿಟ್ಟುಕೊಂಡು ಹಾಗೂ ಬೃಹತ್ ಬಂಡವಾಳವನ್ನು ಎಲ್ಲ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಭೂಮಿ ಸಂಗ್ರಹಣೆ, ಕಾರ್ವಿುಕ ಕಾನೂನುಗಳ ಸುಧಾರಣೆ ಹಾಗೂ ಆಕರ್ಷಕ ರಿಯಾಯಿತಿ ಹಾಗೂ ಉತ್ತೇಜನ

*ಉತ್ಪಾದನೆಗಾಗಿ ಜಮೀನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು

*ಜಮೀನು ಖರೀದಿ ಸುಲಭಗೊಳಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಸೆಕ್ಷನ್ 109ಕ್ಕೆ ತಿದ್ದುಪಡಿ ತರಲಾಗಿದೆ

ಕಾರಿಡಾರ್ ಅಭಿವೃದ್ಧಿ

*ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಮತ್ತು ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್​ಗಳಡಿ ಕೈಗಾರಿಕಾ ನೋಡ್​ಗಳನ್ನು ಅಭಿವೃದ್ಧಿಪಡಿಸುವುದು

*100 ಕ್ಕಿಂತಲೂ ಹೆಚ್ಚು ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ವಿಶೇಷ ಹೂಡಿಕೆ ವಲಯ (ಎಸ್​ಐಆರ್) ಸ್ಥಾಪಿಸಲು ಎಸ್​ಐಆರ್ ಕಾಯ್ದೆ ಜಾರಿ. ಈ ಪ್ರದೇಶವನ್ನು ಕೈಗಾರಿಕಾ ಟೌನ್​ಶಿಪ್ ಎಂದು ಪರಿಗಣಿಸುವುದು

*ಧಾರವಾಡ, ಗದಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳನ್ನೊಳಗೊಂಡ ಧಾರವಾಡ ಎಸ್​ಐಆರ್ ಮೊದಲನೆಯದಾಗಿರುತ್ತದೆ. ಜತೆಗೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಶಿವಮೊಗ್ಗ ಎಸ್​ಐಆರ್ ಮತ್ತು ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನೊಳಗೊಂಡ ಕಲಬುರಗಿ ಎಸ್​ಐಆರ್ ಸ್ಥಾಪಿಸಲಾಗುತ್ತದೆ.

*ಕೆ.ಐ.ಎ.ಡಿ. ಕಾಯ್ದೆ 1966ರಡಿ ಸ್ಥಳೀಯ ಸಂಸ್ಥೆಗಳ ಶಾಸನಬದ್ಧ ಅಧಿಕಾರ/ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆ

*ರಾಜ್ಯದಲ್ಲಿನ ಬೃಹತ್ ಕೈಗಾರಿಕಾ ಪ್ರದೇಶಗಳನ್ನು ಕೈಗಾರಿಕಾ ಟೌನ್​ಶಿಪ್​ಗಳಾಗಿ ಪರಿವರ್ತಿಸುವುದು

ಕೈಗಾರಿಕೆಗೆ ರಿಯಾಯಿತಿ, ಪ್ರೋತ್ಸಾಹ

*ದೇಶದಲ್ಲೇ ಮೊದಲ ಬಾರಿಗೆ ತೆರಿಗೆ ಆಧಾರಿತ ಪೋ›ತ್ಸಾಹ ಬದಲು ಉತ್ಪಾದನಾ ಆಧಾರಿತ ಕಾರ್ಯಕ್ಷಮತೆ ಉತ್ತೇಜಿಸಲು ವಾರ್ಷಿಕ ವಹಿವಾಟಿನ ಮೇಲೆ ಪೋ›ತ್ಸಾಹ ನೀಡಲಾಗುತ್ತದೆ.

*ಕೈಗಾರಿಕೆಯಲ್ಲಿ ಹಿಂದುಗಳಿದ ಜಿಲ್ಲೆಗಳಲ್ಲಿ ಬಂಡವಾಳ ಆಕರ್ಷಿಸಲು ಹೆಚ್ಚಿನ ರಿಯಾಯಿತಿ ಒದಗಿಸುತ್ತಿದ್ದು, ಇದರಿಂದ ರಾಜ್ಯದಲ್ಲಿ ಸಮತೋಲಿತ ಕೈಗಾರಿಕಾಭಿವೃದ್ಧಿ ಖಾತರಿಪಡಿಸಿಕೊಳ್ಳಲು ಸಾಧ್ಯ.

*ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ವಹಿವಾಟು ಆಧಾರಿತ ಬಂಡವಾಳ ಹೂಡಿಕೆ ಸಹಾಯಧನವನ್ನು ನೀಡಲಾಗುತ್ತದೆ. (ಪ್ರತಿ ವರ್ಷ ಶೇ.10 ವಹಿವಾಟಿನ ಮೇಲೆ ಗರಿಷ್ಠ 5 ವರ್ಷಗಳಿಗೆ ಅಥವಾ ಶೇ. 20-30ರ ಸ್ಥಿರಾಸ್ತಿ ಬಂಡವಾಳ ಹೂಡಿಕೆ ಮೇಲೆ ವಿನಾಯಿತಿ)

*ಮುದ್ರಾಂಕ ಹಾಗೂ ನೋಂದಣಿ ಶುಲ್ಕದಲ್ಲಿ ರಿಯಾಯಿತಿ.

*ಭೂ ಪರಿವರ್ತನಾ ಶುಲ್ಕ ಮರುಪಾವತಿ.

*ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್ ತೆರಿಗೆ ವಿನಾಯಿತಿ.

*ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ಸಹಾಯಧನ.

*ಕುಶಲಕರ್ವಿುಗಳಿಗೆ ಸವಲತ್ತುಗಳು.

*ಎಂಎಸ್​ಎಂಇ ಕೈಗಾರಿಕೆಗಳಿಗೆ ತಂತ್ರಜ್ಞಾನ ನವೀಕರಣ ಸಾಲದ ಮೇಲೆ ಬಡ್ಡಿ ಸಹಾಯಧನ.

*ಮಳೆ ನೀರು ಕೊಯ್ಲು ಹಾಗೂ ತ್ಯಾಜ್ಯ ನೀರು ಮರುಬಳಕೆಗೆ ಉತ್ತೇಜನ.

*ವಿಶೇಷ ವರ್ಗದ ಉದ್ಯಮಶೀಲರಿಗೆ ಅಂದರೆ ಎಸ್.ಸಿ/ಎಸ್.ಟಿ, ಮಹಿಳೆಯರು, ಅಲ್ಪಸಂಖ್ಯಾತರು, ಅಂಗವಿಕಲರು ಹಾಗೂ ಮಾಜಿ ಸೈನಿಕರಿಗೆ ಹೆಚ್ಚುವರಿ ಉತ್ತೇಜನ.

*ರಫ್ತು ಆಧಾರಿತ ಘಟಕಗಳಿಗೆ ಉತ್ತೇಜನ.

*ಮಧ್ಯಮ, ಬೃಹತ್, ಮೆಗಾ, ಅಲ್ಟ್ರಾ ಮೆಗಾ ಹಾಗೂ ಸೂಪರ್ ಮೆಗಾ ಕೈಗಾರಿಕೆಗಳಿಗೆ ವಹಿವಾಟು ಆಧಾರಿತ ಬಂಡವಾಳ ಹೂಡಿಕೆ ಸಹಾಯಧನ ನೀಡಲಾಗುವುದು. ಪ್ರತಿ ವರ್ಷ ಸುಮಾರು ಶೇ.1.75-2.50 ವಹಿವಾಟಿನ ಮೇಲೆ ಗರಿಷ್ಠ 5-10 ವರ್ಷಗಳಿಗೆ ಅಥವಾ ಶೇ. 35-60ರ ಸ್ಥಿರಾಸ್ತಿ ಬಂಡವಾಳ ಹೂಡಿಕೆ ಮೇಲೆ ನೀಡಲಾಗುವುದು.

*ಖಾಸಗಿ ಕೈಗಾರಿಕಾ ಪಾರ್ಕ್​ಗಳನ್ನು ಅಭಿವೃದ್ಧಿಪಡಿಸಲು ರಿಯಾಯಿತಿ ಹಾಗೂ ಪೋ›ತ್ಸಾಹ

ಈ ಸಂದಿಗ್ಧ ಸಂದರ್ಭದಲ್ಲಿ ಉತ್ತಮ ಕೈಗಾರಿಕಾ ನೀತಿ ರೂಪುಗೊಂಡಿದೆ. ಚೀನಾದಿಂದ ಹೊರ ಬರುವ ಉದ್ದಿಮೆಗಳನ್ನು ಆಕರ್ಷಿಸಲು ಅನುಕೂಲವಾಗಲಿದೆ. ಪ್ರಧಾನಿ ಸಹ ಅಮೆರಿಕ ಕೈಗಾರಿಕೆಗಳನ್ನು ಆಹ್ವಾನಿಸಿದ್ದಾರೆ. ಆ ಕೈಗಾರಿಕೆಗಳು ಸಹ ರಾಜ್ಯದತ್ತ ನೋಡಲು ಸಹಕಾರಿಯಾಗುತ್ತದೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳು ಬೆಳೆಯುತ್ತವೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದು ಕೈಗಾರಿಕೆ ಬೆಳವಣಿಗೆಗೆ ಅನುಕೂಲವಾಗುತ್ತದೆ. 2019ರಲ್ಲಿ ಬರಬೇಕಾಗಿದ್ದ ಕಾಯ್ದೆ ತಡವಾದರೂ ಉತ್ತಮವಾಗಿ ಬಂದಿದೆ. | ಸಿ.ಆರ್. ಜನಾರ್ದನ್ ಅಧ್ಯಕ್ಷ, ಎಫ್​ಕೆಸಿಸಿಐ

ಕನ್ನಡಿಗರಿಗೆ ಉದ್ಯೋಗ

ಎಲ್ಲ ಹೊಸ ಕೈಗಾರಿಕಾ ಬಂಡವಾಳ ಹೂಡಿಕೆ ಯೋಜನೆಗಳು ಒಟ್ಟಾರೆ ಆಧಾರದ ಮೇಲೆ ಕನ್ನಡಿಗರಿಗೆ ಕನಿಷ್ಠ ಶೇ. 70 ಮತ್ತು ಗರಿಷ್ಠ ಶೇ. 100 ರಷ್ಟು ಗ್ರೂಪ್ ಡಿ ಕಾರ್ವಿುಕರಿಗೆ ಉದ್ಯೋಗ ಒದಗಿಸಬೇಕಿದೆ.

ಕಾರ್ವಿುಕ ಕಾನೂನು ಸುಧಾರಣೆ

  • ರಾತ್ರಿಪಾಳಿಯಲ್ಲಿ ಅಂದರೆ ರಾತ್ರಿ 7 ರಿಂದ ಬೆಳಗ್ಗೆ 6 ಗಂಟೆವರೆಗೆ ಕಾರ್ಯನಿರ್ವಹಿಸಲು ಮುಂದೆ ಬರುವ ಮಹಿಳಾ ಕಾರ್ವಿುಕರಿಗಾಗಿ ಫ್ಯಾಕ್ಟರಿಸ್ ಕಾಯ್ದೆ ತಿದ್ದುಪಡಿ ್ಝಂದು ತ್ರೖೆಮಾಸಿಕದಲ್ಲಿ 125 ಗಂಟೆವರೆಗೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲು ಫ್ಯಾಕ್ಟರಿಸ್ ಕಾಯ್ದೆ ಸೆಕ್ಷನ್ 64 ಹಾಗೂ 65ರಡಿ ತಿದ್ದುಪಡಿ
  • ಕಾಲಕ್ಕನುಗುಣವಾಗಿ ಕನಿಷ್ಠ ವೇತನ ಪರಿಷ್ಕರಣೆಯನ್ನು ಕನಿಷ್ಠ ವೇತನ ಕಾಯ್ದೆಯಲ್ಲಿ ನಿಗದಿಪಡಿಸಲಾಗುವುದು ಮತ್ತು ಹಣದುಬ್ಬರ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಅಂಶಗಳಿಗೂ ಲಿಂಕ್ ಮಾಡುವುದು
  • ಸರಕು ರಫ್ತು ಉತ್ತೇಜಿಸಲು ಕರ್ನಾಟಕ ಇಂಡಸ್ಟ್ರಿಯಲ್ ಎಂಪ್ಲಾಯ್ಮೆಂಟ್​ನಲ್ಲಿ ಇದೇ ವಿನಾಯಿತಿ. ಉತ್ಪಾದನೆ ಮತ್ತು ಎಸ್​ಇಜೆಡ್​ಗಳಿಗೂ ವಿನಾಯಿತಿ.

ಪ್ರಮುಖ ಉದ್ದೇಶಗಳು

  • ರಾಜ್ಯದ ಸಮಗ್ರ ಅಭಿವೃದ್ಧಿ, ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳ ಸ್ಥಾಪನೆ, ಹಿಂದುಳಿದಿರುವ ಕೈಗಾರಿಕಾ ಅಭಿವೃದ್ಧಿಯನುಸಾರ ಬಂಡವಾಳ ಹೂಡಿಕೆಗಳಿಗೆ ರಿಯಾಯಿತಿ ಒದಗಿಸಲು ಜಿಲ್ಲೆಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸುವುದು, ವಲಯ-1 ಹಾಗೂ 2 ರಡಿ ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು ಸೇರುತ್ತವೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ವಲಯ-3 ರಲ್ಲಿ ವರ್ಗೀಕರಿಸಲಾಗಿದೆ.
  • ಸ್ಪರ್ಧಾತ್ಮಕ ಸಾಮರ್ಥ್ಯ ಆಧರಿಸಿ ಆಟೋಮೊಬೈಲ್ಸ್ ಆಟೋ ಕಾಂಪೋನೆಂಟ್ಸ್, ಔಷಧ-ವೈದ್ಯಕೀಯ ಉಪಕರಣಗಳು, ಇಂಜಿನಿಯರಿಂಗ್ ಮಷಿನ್ ಟೂಲ್ಸ್, ಜ್ಞಾನಾಧಾರಿತ ಕೈಗಾರಿಕೆ, ಲಾಜಿಸ್ಟಿಕ್ಸ್, ನವೀಕರಿಸಬಹುದಾದ ಇಂಧನ, ಏರೋಸ್ಪೇಸ್ ಡಿಫೆನ್ಸ್ ಮತ್ತು ಎಲೆಕ್ಟ್ರಿಕ್ ವಾಹನ ಕ್ಷೇತ್ರಗಳಿಗೆ ಪ್ರಾಶಸ್ತ್ಯ
  • ಹೈಟೆಕ್ ಬೆಳವಣಿಗೆ ಬೆಂಬಲಿಸಲು ಇಂಡಸ್ಟ್ರಿ 4.0, ಸಂಶೋಧನೆ ಮತ್ತು ಅಭಿವೃದ್ಧಿ, ಬೌದ್ಧಿಕ ಆಸ್ತಿ ಹಕ್ಕು, ತಂತ್ರಜ್ಞಾನ ಅಳವಡಿಕೆ ಮತ್ತು ನಾವೀನ್ಯತೆ, ಕ್ಲಸ್ಟರ್ ಡೆವಲಪ್​ವೆುಂಟ್ ಇನಿಷಿಯೇಟಿವ್ಸ್ ಮತ್ತು ಸುಸ್ಥಿರತೆ ಹಾಗೂ ಜವಾಬ್ದಾರಿಯುತ ಕೈಗಾರೀಕರಣ ಕ್ಷೇತ್ರಗಳನ್ನು ಗುರುತಿಸಲಾಗಿದೆ.
  • ಕೆಐಎಡಿಬಿ ತನ್ನ ಕೈಗಾರಿಕಾ ಪ್ರದೇಶಗಳಲ್ಲಿ ಎಂಎಸ್​ಎಂಇ ಗಳಿಗಾಗಿ ಹಂಚಿಕೆಯ ಕನಿಷ್ಠ ಶೇ. 30 ಜಮೀನು ಮೀಸಲಿಡು ವುದು, ತಂತ್ರಜ್ಞಾನ ಉನ್ನತೀಕರಣ ಮತ್ತು ತಾಂತ್ರಿಕ ಬೆಂಬಲ