ತುಮಕೂರು: ಕೋವಿಡ್ ಸೋಂಕು ದೃಢಪಟ್ಟು ಶಸ್ತ್ರಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಆತ್ಯಾಧ್ಯುನಿಕ ಕೋವಿಡ್ ಸೋಂಕಿತರ ಒಟಿ (ಅಪರೇಷನ್ ಥಿಯೇಟರ್) ತೆರೆಯಲಾಗಿದೆ ಎಂದು ಎಂಡಿ ಡಾ.ಎಸ್.ಪರಮೇಶ್ ತಿಳಿಸಿದರು.
ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಭಾನುವಾರ ಆರಂಭವಾದ ಕೋವಿಡ್ ಒಟಿಗೆ ಚಾಲನೆ ನೀಡಿ ಮಾತನಾಡಿದರು.
ಕರೊನಾಯಿಂದ ಆರೋಗ್ಯಕ್ಷೇತ್ರದಲ್ಲಿ ನಾವು ಬಹಳಷ್ಟು ಸವಾಲುಗಳನ್ನ ಎದುರಿಸಿದ್ದೇವೆ. 2 ಸಾವಿರಕ್ಕೂ ಹೆಚ್ಚು ರೋಗಿಗಳನ್ನ ಕರೊನಾದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವಂತೆ ವಾಡಿದ್ದೇವೆ ಎಂದರು.
ಕೋವಿಡ್‌ನಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆ ವಾಡಲು ಅತ್ಯಾಧುನಿಕ ಯಂತ್ರಗಳನ್ನ ಖರೀದಿಸಿ ಅತ್ಯಂತ ಸುರಕ್ಷಿತವಾಗಿ ಶಸ್ತ್ರಚಿಕಿತ್ಸಾ ಕೊಠಡಿ ಆರಂಭಿಸಲಾಗಿದೆ. ಸಹಜವಾಗಿ ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಹಾಗೂ ಎಲೆಕ್ಷಿವ್ ಸರ್ಜರಿ ಎನ್ನುವ ಎರಡು ಸರ್ಜರಿ ಮಾಡುತ್ತಿದ್ದೇವೆ ಎಂದರು.
ಅಪಾಯಕಾರಿ ಸನ್ನಿವೇಶದಲ್ಲಿ ಅತ್ಯಂತ ಸುರಕ್ಷಿತವಾದ ಕೋವಿಡ್ ಒಟಿಯನ್ನ ನಮ್ಮ ಸಿದ್ಧಗಂಗಾ ಆಸ್ಪತ್ರೆಯಲ್ಲಿ ತೆರೆಯಲಾಗಿದ್ದು ಗರ್ಭಿಣಿಯರು ಸೇರಿ ಕೋವಿಡ್ ಪಾಸಿಟಿವ್ ಸೊಂಕಿತರ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಯನ್ನ ನಮ್ಮಲ್ಲಿ ವಾಡಬಹುದು ಎಂದರು.
ಆಸ್ಪತ್ರೆ ಸಿಇಒ ಡಾ.ಸಂಜೀವ್‌ಕುವಾರ್ ವಾತನಾಡಿ, ಕೋವಿಡ್ ಒಟಿಗಾಗಿಯೇ ಹೆಫಾ ಫಿಲ್ಟರ್ ಹಾಗೂ ಬಯೋಫ್ಯೂರಿಫೈಯರ್ 50 ಎಂಎಫ್ ಎನ್ನುವ ಎರಡು ಅತ್ಯಾದುನಿಕ ಯಂತ್ರಗಳನ್ನ ಅಳವಡಿಸಲಾಗಿದೆ. ಕೋವಿಡ್ ಸಹಜವಾಗಿ 0.3 ಮೈಕ್ರಾನ್‌ನಷ್ಟು ಗಾತ್ರವಿರುತ್ತದೆ, ಇದಕ್ಕಿಂತಲೂ ಕಡಿಮೆ ಗಾತ್ರದ ವೈರಸ್‌ನ್ನು ಈ ಎರಡೂ ಯಂತ್ರಗಳು ನಾಶ ಮಾಡುತ್ತವೆ ಎಂದರು.
ಸಿದ್ಧಗಂಗಾ ಅಸ್ಪತ್ರೆಯ ಹಿರಿಯ ಫಿಜಿಷಿಯನ್ ಡಾ.ಶಾಲಿನಿ ಮಾತನಾಡಿ, ಇದುವರೆಗೂ 2 ಸಾವಿರಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ ತೃಪ್ತಿ ನಮಗಿದೆ, ಇಂದು ಪ್ರಾರಂಭವಾಗಿರುವ ಅತ್ಯಾಧುನಿಕ ಅಪರೇಷನ್ ಥಿಯೇಟರ್‌ಗಳಿಂದ ನಮ್ಮ ಸೇವೆಗಳನ್ನು ಇನ್ನೂ ಉತ್ತಮಗೊಳಿಸಲು ಸಹಕರಿಸುತ್ತದೆ ಎಂದರು.