ಮಳವಳ್ಳಿ ತಾಲೂಕಿನ ಕಂದೇಗಾಲ-ಕಲ್ಲುವೀರನಹಳ್ಳಿ ನಡುವೆ ಇರುವ ಮತ್ತಿತಾಳೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. 
ಜಿಲ್ಲೆ

ಮತ್ತಿತಾಳೇಶ್ವರ ಬ್ರಹ್ಮ ರಥೋತ್ಸವ ವೈಭವ

ಮಳವಳ್ಳಿ: ತಾಲೂಕಿನ ಕಂದೇಗಾಲ ಮತ್ತು ಕಲ್ಲುವೀರನಹಳ್ಳಿ ಗ್ರಾಮಗಳ ನಡುವೆ ಇರುವ ಇತಿಹಾಸ ಪ್ರಸಿದ್ಧ ಮತ್ತಿತಾಳೇಶ್ವರ ದೇವಸ್ಥಾನದಲ್ಲಿ ಗುರುವಾರ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ಇಲ್ಲಿನ ದೇವಸ್ಥಾನದಲ್ಲಿ ರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಅರ್ಚಕರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಮತ್ತಿತಾಳೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಆವರಣದಲ್ಲಿ ಅಲಂಕರಿಸಿದ್ದ ರಥಕ್ಕೆ ಮಂಗಳವಾದ್ಯದೊಡನೆ ತಂದು ಪ್ರತಿಷ್ಠಾಪಿಸಲಾಹಿತು. ತಹಸೀಲ್ದಾರ್ ಡಾ.ಲೋಕೇಶ್ ರಥೋತ್ಸವಕ್ಕೆ ಚಾಲನೆ ನೀಡಿದರು.

ಬಸವ ಹಾಗೂ ವಿವಿಧ ದೇವರ ಪೂಜಾ ಕುಣಿತ ಮತ್ತು ಛಾಮರ ಮೆರವಣಿಗೆಯಲ್ಲಿ ಸಾಗಿತು. ನೆರೆದಿದ್ದ ಸಹಸ್ರರಾರು ಭಕ್ತರು ಜಯಘೋಷದೊಡನೆ ಬ್ರಹ್ಮರಥವನ್ನು ದೇವಸ್ಥಾನದ ಸುತ್ತಲೂ ಎಳೆದರು. ನವ ವಧುವರರು ಹಾಗೂ ಹರಕೆ ಹೊತ್ತ ಭಕ್ತರು ಹಣ್ಣು-ದವನ ಎಸೆದು ಭಕ್ತಿ ಸಮರ್ಪಿಸಿದರು. ತಾಲೂಕು ಆಡಳಿತ ವತಿಯಿಂದ ಮೂಲಸೌಕರ್ಯ ಕಲ್ಪಸಲಾಗಿತ್ತು. ಪೊಲೀಸ್ ಇಲಾಖೆ ಬಂದೋಬಸ್ತ್ ಮಾಡಿತ್ತು.

ಜಿಲ್ಲೆ ಹಾಗೂ ಇತರ ಜಿಲ್ಲೆಗಳಿಂದಲೂ ಆಗಮಿಸಿದ್ದ ಸಹಸ್ರಾರು ಭಕ್ತರು ಪೂಜೆ ಸಲ್ಲಿಸಿ ಸರತಿಯಲ್ಲಿ ಸಾಗಿ ದೇವರ ದರ್ಶನ ಪಡೆದರು.