ಜಿಲ್ಲೆ

ಸಮಾನತೆಗಾಗಿ ಶ್ರಮಿಸಿದ ಚೇತನ

ಸೋಮಲಿಂಗ ತಳವಾರ

ಬೋರಗಾಂವ: ಅಂಬೇಡ್ಕರ್​ ಅವರು ತಾರತಮ್ಯ ತೊಡೆದುಹಾಕಲು ಮತ್ತು ಎಲ್ಲರಿಗೂ ಸಮಾನತೆ ಮತ್ತು ಸ್ವಾತಂತ್ರ್ಯ ನೀಡಲು ಸಂವಿಧಾನ ಬರೆದಿದ್ದಾರೆ ಎಂದು ಯುವನಾಯಕ ಉತ್ತಮ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಅರಿಹಂತ ಸಂಸ್ಥೆ, ಪಿಕೆಪಿಎಸ್​, ಅರಿಹಂತ್​ ಮಿಲ್ಕ್​ ಡೆರಿ, ಅರಿಹಂತ್​ ಶಾಲೆ, ಕಾಲೇಜು, ಸ್ಪಿನ್ನಿಂಗ್​ ಮಿಲ್​ನಲ್ಲಿ ಸೋಮವಾರ ಡಾ. ಬಾಬಾಸಾಹೇಬ್​ ಅಂಬೇಡ್ಕರ್​ ಜನ್ಮದಿನ ಆಚರಿಸಿ ಮಾತನಾಡಿದರು.

ಅಭಿನಂದನ್​ ಪಾಟೀಲ್​ ಮತ್ತು ಉತ್ತಮ ಪಾಟೀಲ ಅಂಬೇಡ್ಕರ್​ ಭಾವಚಿತ್ರಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಅರಿಹಂತ ಸಂಸ್ಥೆ ಉಪಾಧ್ಯ ಸತೀಶ ಪಾಟೀಲ, ನಿರ್ದೇಶಕ ಸುಭಾಷ ಶೆಟ್ಟಿ, ಅಭಯಕುಮಾರ ಕರೋಲೆ, ಜೆಪಾಲ ನಾಗಾವೆ, ರಾಜು ಮಗದುಮ್ಮ, ಪೀರಗೊಂಡ ಪಾಟೀಲ, ಭುಜಗೊಂಡ ಪಾಟೀಲ, ಸಂದೀಪ ಪಾಟೀಲ, ಶಿವಾನಂದ ರಾಜಮಾನೆ, ನಿರ್ಮಲಾ ಬಳ್ಳೊಳೆ, ಸಿಇಒ ಅಶೋಕ ಬಂಕಾಪುರೆ, ಪ್ರದಿಪ ಮಾಳಿ, ರಾಜೇಂದ್ರ ಐದಮಾಳಿ, ಸಹಾಯಕ ವ್ಯವಸ್ಥಾಪಕ ಅಭಿನಂದನ ಬೇನಾಡೆ, ಆರ್​.ಟಿ.ಚೌಗುಲಾ, ರಾಕೇಶ ಫಿರಗಣ್ಣವರ ಇತರರಿದ್ದರು.