ನರೇಗಲ್ಲ ಬಣಜಿಗರ ಸಂಘದ ದಶಮಾನೋತ್ಸವ ಸಮಾರಂಭದಲ್ಲಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು. ಸಿ 
ಜಿಲ್ಲೆ

ಬಣಜಿಗ ಸಂಘದ ಸಮಾಜಮುಖಿ ಕಾರ್ಯ ಶ್ಲಾಘನೀಯ

ನರೇಗಲ್ಲ: ವೀರಶೈವ ಲಿಂಗಾಯತ ಸಮಾಜದ ಭಾಗವಾಗಿರುವ ಬಣಜಿಗ ಸಂಘದ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಶಾಸಕ ಜಿ. ಎಸ್. ಪಾಟೀಲ ಹೇಳಿದರು.

ಇಲ್ಲಿನ ರೋಟರಿ ಭವನದಲ್ಲಿ ಭಾನುವಾರ ಜರುಗಿದ ನರೇಗಲ್ಲ- ಕೋಡಿಕೊಪ್ಪ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘ- ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಕಷ್ಟಕರ. ಕಟ್ಟಿ ಬೆಳೆಸಿದ ಸಂಘಗಳನ್ನು ಮುನ್ನಡೆಸುವುದೂ ಇನ್ನೂ ಕಷ್ಟವಾಗಿದೆ. ಸಮಾಜದ ಬಾಂಧವರು ಹತ್ತು ವರ್ಷ ಈ ಸಂಘವನ್ನು ಮುನ್ನಡೆಸಿಕೊಂಡು ಬಂದದ್ದು ಸಾಧನೆಯೇ ಸರಿ. ಸಮಗ್ರ ವೀರಶೈವ ಲಿಂಗಾಯತರ ಹಿತರಕ್ಷಣೆಯ ಉದ್ದೇಶವನ್ನು ಎಲ್ಲರೂ ಮೆಚ್ಚಬೇಕು. ಶ್ರೀಶೈಲ ಜಗದ್ಗುರುಗಳು ಇದಕ್ಕಾಗಿ ಶ್ರಮಿಸುತ್ತಿದ್ದಾರೆ. ಜಗದ್ಗುರುಗಳನ್ನು ನಾವೆಲ್ಲರೂ ಬೆಂಬಲಿಸಬೇಕು. ಜಾತಿಗೆ ಸೀಮಿತಗೊಳಿಸಿ ಸಂಘಟನೆಗಳನ್ನು ಕಟ್ಟಿದರೆ ಅವು ಬಹಳಷ್ಟು ದಿನ ಉಳಿಯುವುದಿಲ್ಲ. ಬದಲಾಗಿ ವೀರಶೈವ ಲಿಂಗಾಯತ ಪಂಗಡಗಳೆಲ್ಲವನ್ನು ಒಂದುಗೂಡಿಸುವ ಕಾರ್ಯಕ್ಕೆ ಎಲ್ಲರೂ ಮನಸು ಮಾಡಬೇಕು ಎಂದರು.

ಸಂಘದಿಂದ ಸ್ಥಾಪಿಸಲು ನಿರ್ಧರಿಸಿರುವ ವಿದ್ಯಾನಿಧಿ ಯೋಜನೆಗೆ ವೈಯಕ್ತಿಕವಾಗಿ 1ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು. ಸಮಾರಂಭದಲ್ಲಿ ಗಣ್ಯರಿಗೆ ಸನ್ಮಾನಿಸಲಾಯಿತು. ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ನಿವೃತ್ತ ಶಿಕ್ಷಕ ಸಿ.ವಿ. ವಂಕಲಕುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎ. ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಡಾ. ಎ. ಕೆ. ನಾಶಿ, ವೀರಣ್ಣ ಶೆಟ್ಟರ, ರೋಣ ತಾಲೂಕಾಧ್ಯಕ್ಷ ಮುತ್ತಣ ಸಂಗಳದ, ಗಜೇಂದ್ರಗಡ ಅಧ್ಯಕ್ಷ ಎಸ್.ಎಸ್. ವಾಲಿ, ರಾಜಣ್ಣ ಹೂಲಿ, ಶರಣಪ್ಪ ಜೋಳದ, ಎಸ್.ಎ. ಪಾಟೀಲ, ರಾಜಶೇಖರ ಜೋಳದ, ನಿಂಗಪ್ಪ ಲಕ್ಕನಗೌಡ್ರ, ಅಲ್ಲಾಭಕ್ಷಿ ನದಾಫ್, ಬಸವರಾಜ ವಂಕಲಕುಂಟಿ, ರಾಜಶೇಖರ ವಂಕಲಕುಂಟಿ, ಅನೀಲ ಗೋಡಚಪ್ಪನವರ, ಶಿವಣ್ಣ ರಂಜಣಗಿ, ಸಂಗಮೇಶ ಪಟ್ಟಣಶೆಟ್ಟಿ ಇತರರಿದ್ದರು.

ಮುಖ್ಯ ಶಿಕ್ಷಕ ಎಸ್. ಎನ್. ಹೂಲಗೇರಿ ಸ್ವಾಗತಿಸಿದರು. ಶಿವಯೋಗಿ ಜಕ್ಕಲಿ ನಿರೂಪಿಸಿ, ವಂದಿಸಿದರು. ರೋಣ ಮತ್ತು ಗಜೇಂದ್ರಗಡ ತಾಲೂಕುಗಳ ವಿವಿಧ ಗ್ರಾಮಗಳ ಸಮಾಜದ ಗಣ್ಯರು ಪಾಲ್ಗೊಂಡಿದ್ದರು.