ಜಿಲ್ಲೆ

ಮರೆಯಾಗುತ್ತಿವೆ ಮಲೆನಾಡಿನ ಗಿಡ್ಡ ಹಸುಗಳು

ಎನ್.ಆರ್.ಪುರ: ಮಲೆನಾಡಿನ ಗಿಡ್ಡ ಜಾತಿಯ ಹಸುಗಳ ಹಾಲು , ಸಗಣಿಯಲ್ಲಿ ಔಷಧಿಯ ಗುಣಗಳಿದ್ದು, ಮಲೆನಾಡಿನ ಹೆಮ್ಮೆಯ ಗಿಡ್ಡ ಜಾತಿ ಹಸುಗಳು ಈಗ ನಿಧಾನವಾಗಿ ಮರೆಯಾಗುತ್ತಿದೆ ಎಂದು ಹರಿಹರಪುರದ ಪ್ರಬೋಧಿನಿ ಗುರುಕುಲದ ಉಪನ್ಯಾಸಕ ಶ್ರೀಧರ್ ವಿಷಾದ ವ್ಯಕ್ತಪಡಿಸಿದರು.

ಕಾನೂರಿನ ರಾಷ್ಟೀಯ ಸ್ವಯಂ ಸೇವಾ ಸಂಘದ ಗೋ ಸೇವಾ ಗತಿ ವಿಧಿ ಆಶ್ರಯದಲ್ಲಿ ಗೋ ಸೇವಾ ಗತಿ ವಿಧಿ ಕಾರ್ಯನಿರ್ವಾಹಕ ರಾಘವೇಂದ್ರ ಅವರ ಮನೆ ಅಂಗಳದಲ್ಲಿ ನಡೆದ ಗೋ ಸಂರಕ್ಷಣೆ ಹಾಗೂ ಗೋ ಉತ್ಪನ್ನಗಳ ಮೌಲ್ಯ ವರ್ದನೆ ಕಾರ್ಯಕ್ರಮದಲ್ಲಿ ಗೋಮಯ ಹಾಗೂ ಗೋ ಮೂತ್ರದಿಂದ ತಯಾರಿಸುವ ದಿನಬಳಕೆ ವಸ್ತುಗಳ ಬಗ್ಗೆ ಮಾಹಿತಿ ನೀಡಿ, ಸಗಣಿ ಹಾಗೂ ಹಿಟ್ಟನ್ನು ಬಳಸಿ ದೀಪದ ಹಣತೆ, ದೂಪದ ಕಡ್ಡಿ, ನೋವಿನ ಎಣ್ಣೆ, ಸಾಬೂನು, ಹಲ್ಲು ಉಜ್ಜುವ ಪುಡಿ, ಪಾತ್ರೆ ತೊಳೆಯುವ ಪುಡಿ ತಯಾರಿಸಬಹುದು. ಇಂತಹ ದಿನ ಬಳಕೆಯ ವಸ್ತುಗಳನ್ನು ರಾಸಾಯನಿಕ ಅಲ್ಲದ ಗೋ ಮೂತ್ರ, ಗೋಮಯ, ಹೂ ಮಂತಾದ ವಸ್ತುಗಳನ್ನು ಉಪಯೋಗಿಸಿಕೊಂಡು ತಯಾರಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಹಾಗೂ ಸ್ವಾವಲಂಬನೆಯಿಂದ ಬದುಕಲು ಮಾರ್ಗವೂ ಸಿಕ್ಕುತ್ತದೆ ಎಂದರು.

ನಂತರ ಸಗಣಿ, ಗೋ ಮೂತ್ರ, ಹೂ, ಲೋಬಾನ, ಕರ್ಫೂರ, ಹಿಟ್ಟು ಮುಂತಾದ ವಸ್ತುಗಳನ್ನು ಬಳಸಿ ದಿನಬಳಕೆ ವಸ್ತುಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ತಿಳಿಸಿದರು. ಗೋ ಸೇವಾ ಗತಿ ವಿಧಿ ಕಾರ್ಯನಿರ್ವಾಹಕ ರಾಘವೇಂದ್ರ, ಜಮ್ಮಿಟ್ಟಿಗೆ ದಿನೇಶ್, ಸುಭಾಷ ಇದ್ದರು.