ಇಳಕಲ್ಲದ ತಹಸೀಲ್ದಾರ್ ಕಚೇರಿ ಆವರಣ ಮುಂದೆ ಕರವೇ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರವೇ ಕಾರ್ಯಕರ್ತ ಅಶೋಕ ಪೂಜಾರಿ. 
ಜಿಲ್ಲೆ

ಮೂರನೇ ದಿನ ಪೂರೈಸಿದ ಧರಣಿ

ದತ್ತಾತ್ರೇಯ ಪಿ ಕುಲಕರ್ಣಿ

ಇಳಕಲ್ಲ: ಗ್ರಾನೈಟ್ ಶೋರೂಮ್ ಅನಧಿಕೃತ ವ್ಯಾಪಾರದ ವಿರುದ್ಧ ನಗರದಲ್ಲಿ ಕರವೇ ವತಿಯಿಂದ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಬುಧವಾರ ಮೂರನೇ ಪೂರೈಸಿತು.

ಸತ್ಯಾಗ್ರಹದಲ್ಲಿದ್ದ ನಾಲ್ಕು ಜನರು ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರವೇ ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವರಾಜ ಧಮರ್ಂತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಇನ್ನೂವರೆಗೂ ಯಾವುದೇ ಅಧಿಕಾರಿಗಳು ಬೇಟಿ ನೀಡಿ ನಮ್ಮೊಂದಿಗೆ ಚರ್ಚೆ ನಡೆಸಿಲ್ಲ ಎಂದು ತಾಲೂಕು ಕರವೇ ಅಧ್ಯಕ್ಷ ಮಹಾಂತೇಶ ವಂಕಲಕುಂಟಿ ತಿಳಿಸಿದ್ದಾರೆ.