ಹುಬ್ಬಳ್ಳಿ: ಶ್ರೀಗಳ ವರ್ಧಂತಿ ಮಹೋತ್ಸವ ನಿಮಿತ್ತ ಶ್ರೀ ಭಗವತ್ಪಾದಂ ಆಧ್ಯಾತ್ಮಿಕ ಸಂಸ್ಥೆ ಮತ್ತು ಸಮಸ್ತ ಹುಬ್ಬಳ್ಳಿ ಭಕ್ತವೃಂದ ವತಿಯಿಂದ ಹರಿಹರಪುರದ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹಪೀಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿಗಳ ಶೋಭಾಯಾತ್ರೆಯು ನಗರದಲ್ಲಿ ಮಂಗಳವಾರ ಅದ್ದೂರಿಯಿಂದ ಜರುಗಿತು.
ಇಲ್ಲಿಯ ಹವ್ಯಕ ಭವನದಿಂದ ಹೊರಟ ಶೋಭಾಯಾತ್ರೆಯು ಗೋಕುಲ ಗಾರ್ಡ್‌ನ ತಲುಪಿ ಮರಳಿ ಭವನಕ್ಕೆ ಆಗಮಿಸಿತು. ಈ ವೇಳೆ ಭಕ್ತರು ಕೋಲಾಟವಾಡುತ್ತ, ಭಾಗವಧ್ವಜ ಹಿಡಿದು ಹೊರಟರು. ಗೊಂಬೆ ಕುಣಿತ, ವಾದ್ಯ ಮೇಳವು ಶೋಭಾಯಾತ್ರೆಗೆ ಮೆರಗು ತಂದಿತು. ಭಕ್ತರು ದಾರಿಯುದ್ದಕ್ಕೂ ರಂಗೋಲಿ ಬಿಡಿಸಿದ್ದಲ್ಲದೇ ಶ್ರೀಗಳಿಗೆ ಪುಷ್ಪ ಸಮರ್ಪಿಸಿದರು.
ಶೋಭಾಯಾತ್ರೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಪ್ರಮುಖರಾದ ಎ.ಸಿ. ಗೋಪಾಲ, ಅಪ್ಪಯ್ಯ ನಾಲತ್ವಾಡಮಠ, ವೀಣಾ ಹೆಗಡೆ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಸುರೇಶ ಶೇಜವಾಡಕರ, ಬಿಂದುಮಾಧವ ಪುರೋಹಿತ, ಹನುಮಂತ ಡಂಬಳ, ಹರಿಓಂ ಸುಧಾಕರ ಶೆಟ್ಟಿ, ವಿವೇಕ ಹೆಗಡೆ, ರತ್ನಾಕರ ಶೆಟ್ಟಿ, ರಘು ಯಲ್ಲಕ್ಕನವರ, ಮನೋಹರ ಪರ್ವತಿ ಇತರರಿದ್ದರು. ಶೋಭಾಯಾತ್ರೆಗೆ ಮೊದಲು ಹವ್ಯಕ ಭವನದಲ್ಲಿ ಶ್ರೀಚಕ್ರ ನವಾವರಣ ಪೂಜೆ, ಮಂತ್ರಾಕ್ಷತೆ, ತೀರ್ಥ-ಪ್ರಸಾದ ವಿತರಣೆ ನಡೆಯಿತು. ಗೋಕುಲ ಗಾರ್ಡನ್‌ನಲ್ಲಿ ಶ್ರೀಗಳಿಂದ ಗೋಪೂಜೆ, ಶ್ರೀಗಳಿಗೆ ಭಕ್ತಿ ಸಮರ್ಪಣೆ ಹಾಗೂ ಆಶೀರ್ವಚನ ಕಾರ್ಯಕ್ರಮ ಜರುಗಿತು.