ವಿಜಯವಾಣಿ ಸುದ್ದಿಜಾಲ ಮಂಗಳೂರು
ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿ ಹೊಸ ಕ್ಯಾಂಪಸ್ ಅಂತಾರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆಯನ್ನು ಹೊಂದಿದ್ದು, ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಭದ್ರ, ಸೌಹಾರ್ದ ರಾಷ್ಟ್ರ ಕಟ್ಟುವಂತಹ ಶಿಕ್ಷಣ ಇಲ್ಲಿ ದೊರೆಯಲಿ ಎಂದು ಯೆನೆಪೋಯ ಯುನಿವರ್ಸಿಟಿ ಚಾನ್ಸಲರ್ ಡಾ.ವೈ.ಅಬ್ದುಲ್ಲ ಕುಂಞಿ ಹೇಳಿದರು
ಮಂಗಳೂರಿನ ಅರ್ಕುಳದಲ್ಲಿ ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿಯ ಹೊಸ ಕ್ಯಾಂಪಸ್ ಅನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ದಿ.ಎಂ.ಅಹಮ್ಮದ್ ಅವರು ಸ್ಥಾಪಕ ಅಧ್ಯಕ್ಷರಾಗಿರುವ ಎ.ಕೆ.ಸಮೂಹ ಸಂಸ್ಥೆಯು ಗುಣಮಟ್ಟ ಹಾಗೂ ವಿಶ್ವಾಸಾರ್ಹ ಪರಂಪರೆಯನ್ನು ಹೊಂದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು
ಶಾಹೀನ್ ಸಮೂಹ ಸಂಸ್ಥೆಯ ಚೇರ್ಮನ್ ಡಾ.ಅಬ್ದುಲ್ ಖಾದರ್, ಎನ್‌ಸಿಎಎಚ್‌ಪಿ ಕರ್ನಾಟಕ ಚೇರ್ಮನ್ ಡಾ.ಯು.ಟಿ.ಇಫ್ತಿಕಾರ್, ಅಂತಾರಾಷ್ಟ್ರೀಯ ತರಬೇತುದಾರ ಡಾ.ಸೆಯ್ಯದ್ ಹಬೀಬ್, ಖತೀಬರಾದ ಮುಹಮ್ಮದ್ ಕುಂಞಿ, ಮೌಲಾನಾ ತಯ್ಯಬ್, ಅಡ್ಯಾರ್ ಗ್ರಾಪಂ ಅಧ್ಯಕ್ಷ ಅಬ್ದುಲ್ ಜಲೀಲ್, ಕೊಪ್ಪಳ ಜಾಮಿಯ ಮಸೀದಿ ಅಧ್ಯಕ್ಷ ಅಬ್ಬುಲ್ ರಹ್ಮಾನ್ ಮುಖ್ಯ ಅತಿಥಿಗಳಾದ್ದರು.
ಪ್ರಸ್ತಾವನೆಗೈದ ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿಯ ಚೇರ್ಮನ್ ಮೊಹಮ್ಮದ್ ನಿಸಾರ್ ಪ್ರಸ್ತಾವನೆಗೈದರು. ಪ್ರಿನ್ಸಿಪಾಲ್ ಲುಬ್ನಾ ಬಾನು ಸ್ವಾಗತಿಸಿದರು. ನಿರ್ದೇಶಕಿ ಡಾ.ನಫೀಸಾ ಶೆರಿನ್, ಟ್ರಸ್ಟಿಗಳಾದ ಮಹಮ್ಮದ್ ರಿಜ್ವಾನ್, ಎ.ಕೆ.ನೌಶಾದ್, ಎ.ಕೆ.ನಝೀಮ್, ಎಸ್.ಎಂ.ಫಾರೂಕ್ ಉಪಸ್ಥಿತರಿದ್ದರು.
ಹೊಸ ಕ್ಯಾಂಪಸ್ ಉನ್ನತ ದರ್ಜೆಯ ಆಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಿದ್ದು, ಅಕಾಡೆಮಿಯ ವಿಸ್ತರಣೆ ಯೋಜನೆಗಳ ಭಾಗವಾಗಿದೆ. ಮಂಗಳೂರು- ಬೆಂಗಳೂರು ಹೆದ್ದಾರಿಯ ಉದ್ದಕ್ಕೂ 3.6 ಎಕರೆ ವಿಶಾಲ ಪ್ರದೇಶದಲ್ಲಿ ನೆಲೆಗೊಂಡಿರುವ ಕ್ಯಾಂಪಸ್, ಅನುಕೂಲಕರ ಕಲಿಕೆಯ ವಾತಾವರಣ ನೀಡುತ್ತದೆ.
* ವಸ್ತುಪ್ರದರ್ಶನ: ಕ್ಯಾಂಪಸ್ ಉದ್ಘಾಟನೆ ಸಮಾರಂಭಕ್ಕೆ ಮೆರುಗು ನೀಡುವ ಉದ್ದೇಶದಿಂದ ಶುಕ್ರವಾರ ಆರಂಭಗೊಂಡಿರುವ ವೈವಿಧ್ಯಮಯ ವಸ್ತುಪ್ರದರ್ಶನ ಫೆ.8ರಂದು ಬೆಳಗ್ಗೆ 10ರಿಂದ ರಾತ್ರಿ 8ರ ತನಕ ಆಯೋಜಿಸಲಾಗಿದೆ. ಅಶ್ವರೋಹಣ, ಬಿಲ್ಲುಗಾರಿಕೆ, ಬಲೂನ್ ನೆಗೆತ, ಬೌನ್ಸರ್ ಗೇಮ್ ಹಾಗೂ ಸ್ವಾದಿಷ್ಟ ಖಾದ್ಯಗಳ ಸ್ಟಾಲ್‌ಗಳ ವ್ಯವಸ್ಥೆ ವಸ್ತುಪ್ರದರ್ಶನ ಒಳಗೊಂಡಿದೆ.
---------
ಅರ್ಕುಳದಲ್ಲಿ ಉನ್ನತ ದರ್ಜೆಯ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿ ಹೊಸ ಕ್ಯಾಂಪಸ್ ಆರಂಭಿಸಲಾಗಿದೆ.
* ಮೊಹಮ್ಮದ್ ನಿಸಾರ್,
ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿಯ ಚೇರ್ಮನ್