ಸೋಮವಾರಪೇಟೆ: ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್ ಮಾತನಾಡಿ, ಕರೊನಾ ಸೇನಾನಿಗಳ ಸೇವೆ ಶ್ಲಾಘನೀಯ. ಅದರಲ್ಲೂ ಸೂಕ್ತ ಭದ್ರತೆಯಿಲ್ಲದೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಸೂಕ್ತ ಭದ್ರತೆ ಹಾಗೂ ಹೆಚ್ಚಿನ ವೇತನ ನೀಡಬೇಕು ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರಾದ ಗೌಡಳ್ಳಿ ಗ್ರಾಮದ ಜಿ.ಆರ್.ರುಕ್ಮಿಣಿ, ಎಚ್.ಆರ್.ಇಂದುಮತಿ, ಹಿರಿಕರ ಬಿ.ಟಿ.ಪ್ರೇಮಾ, ಶುಂಠಿ ಎಸ್.ಎಂ.ಶೈಲಾ, ನಂದಿಗುಂದ ಸಿ.ಟಿ.ವೀಣಾ, ರಾಮನಳ್ಳಿ ಸುಧಾಮಣಿ, ದೊಡ್ಡಮಳ್ತೆ ಬಿ.ಎಸ್.ಈಶ್ವರಿ, ಕಾಗಡಿಕಟ್ಟೆ ಎಸ್.ಆರ್.ಭವ್ಯಾ, ಹೊನವಳ್ಳಿ ಎಸ್.ಎಸ್.ಜಯಲಕ್ಷ್ಮೀ, ದೊಡ್ಡಹಣಕೋಡು ಎಚ್.ಆರ್.ಗೀತಾ ಅವರನ್ನು ಸನ್ಮಾನಿಸಲಯಿತು. ಬಳಿಕ ಎಲ್ಲರೂ ಅನಿಸಿಕೆ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷ ಎನ್.ಎಸ್.ಪರಮೇಶ್, ನಿರ್ದೇಶಕರಾದ ವಿ.ಎನ್.ನಾಗರಾಜ್, ಪುಷ್ಪಾ ಸುರೇಶ್, ವಾಣಿ ಶಿವಕುಮಾರ್, ಮಮತಾ ಅಶೋಕ್, ಸುಮಿತ್ರಾ ಮಹೇಶ್, ಜಿ.ಪಿ.ಸುನಿಲ್, ಸಿ.ಈ.ವೆಂಕಟೇಶ್, ಕೆ.ಜಿ.ದಿನೇಶ್, ಜಿ.ಈ.ಸುರೇಶ್, ಮೇಲ್ವಿಚಾರಕ ಜೆ.ಪಿ. ಜಯಪ್ರಕಾಶ್, ಕಾರ್ಯನಿರ್ವಹಣಾಧಿಕಾರಿ ಕೆ.ಕೆ.ಶಿವಪ್ರಕಾಶ್ ಇದ್ದರು.