ಬೈಲಹೊಂಗಲ: ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಬೆಲೆಬಾಳುವ ಜಮೀನು ದಾನ ಮಾಡಿದ ಚಿಕ್ಕಮಠ ಕುಟುಂಬದ ಸಮಾಜ ಸೇವೆ ಅಪಾರ ಎಂದು ಯರಗೊಪ್ಪ ಹಿರೇಮಠದ ಮಲ್ಲಿಕಾರ್ಜುನ ಶಾಸ್ತ್ರಿ ಹೇಳಿದರು.
ತಾಲೂಕಿನ ಬೈಲವಾಡ ಗ್ರಾಮದ ಎಸ್‌ಜಿ ಚಿಕ್ಕಮಠ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಲೆಯ ಭೂದಾನಿಗಳಾದ ದಿ. ಶಿವಬಸಯ್ಯ ಚಿಕ್ಕಮಠ, ದಿ. ಗುರುದೇವ ಚಿಕ್ಕಮಠ ಮೂರ್ತಿಗಳ ಅನಾವರಣ ಕಾರ್ಯಕ್ರಮ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಶಿವಬಸಯ್ಯ ಚಿಕ್ಕಮಠ ಅವರು ಬೈಲಹೊಂಗಲದಲ್ಲಿ ಪಿಎಲ್‌ಡಿ ಬ್ಯಾಂಕ್ ಸ್ಥಾಪನೆ, ಎಂ.ಕೆ.ಹುಬ್ಬಳ್ಳಿ ಸಕ್ಕರೆ ಕಾರ್ಖಾನೆ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರ ಮೊಮ್ಮಗ ದಿ. ಗುರುದೇವ ಚಿಕ್ಕಮಠ ಚಲನಚಿತ್ರ ನಿರ್ಮಾಣದ ಮೂಲಕ ಕಲಾಸೇವೆ ಮಾಡಿದ್ದಾರೆ ಎಂದರು.
ನಿವತ್ತ ಮುಖ್ಯಶಿಕ್ಷಕ ಜಿ.ಬಿ. ತುರಮರಿ, ವರ್ತಯ್ಯಸ್ವಾಮಿ ಚಿಕ್ಕಮಠ ಮಾತನಾಡಿದರು. ಕಾಂಗ್ರೆಸ್ ಮುಖಂಡ ಬಸವರಾಜ ಕೌಜಲಗಿ, ಚನ್ನಬಸಯ್ಯ ಹಿರೇಮಠ, ಗ್ರಾಪಂ ಅಧ್ಯಕ್ಷೆ ಗಿರಿಜಾ ಮೋದಗಿ, ವಕೀಲೆ ಸುಜಾತಾ ಚಿಕ್ಕಮಠ, ಚಲನಚಿತ್ರ ನಿರ್ಮಾಪಕ ದಯಾನಂದ ಚಿಕ್ಕಮಠ, ಸಿ.ಜಿ. ಹಿರೇಮಠ, ಕುಮಾರ ಹಿರೇಮಠ, ಸಿ.ಎಸ್. ಕುಲಕರ್ಣಿ, ವಕೀಲರಾದ ಬಿ.ಎಸ್.ಕಿವಡಸಣ್ಣವರ, ಎಸ್.ಎಸ್. ಮಠದ, ಸಿ.ಎಸ್. ಚಿಕ್ಕನಗೌಡರ, ಎಂ.ಆರ್. ಮೆಳವಂಕಿ, ಎ್.ಎಸ್. ಸಿದ್ದನಗೌಡರ, ಅದಶ್ಯ ಸಿದ್ರಾಮನಿ, ಬಿ.ಬಿ. ವೆಂಕಣ್ಣವರ, ಪಿ.ಡಿ. ಮರಕಟ್ಟಿ, ರಮೇಶ ಕುರಬರ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಮೊರಬದ, ಮೋಹನ ನಾಯ್ಕ, ತಮ್ಮಣ್ಣಗೌಡ ಪಾಟೀಲ, ಉದ್ಯಮಿಗಳಾದ ಅರ್ಚನಾ ಸಿಂಗೆ, ಗೀತಾ ಅಂಗಡಿ ಇತರರಿದ್ದರು.