ಸಿಂಧನೂರು: ಪೌರ ಕಾರ್ಮಿಕರ ಪರಿಶ್ರಮದಿಂದ ಪಟ್ಟಣ ಸ್ವಚ್ಛಗೊಳಿಸಿ ಎಲ್ಲರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಪಪಂ ಅಧ್ಯಕ್ಷ ಬಾಪುಗೌಡ ದೇವರಮನಿ ಹೇಳಿದರು.
ಇದನ್ನೂ ಓದಿ:ಮೈಸೂರಿನಲ್ಲಿ ಪೌರ ಕಾರ್ಮಿಕರ ದಿನಾಚರಣೆ
ತಾಲೂಕಿನ ತುರ್ವಿಹಾಳದ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಪೌರ ನೌಕರರ ಸಂಘ ಹಾಗೂ ಪಪಂ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಗಡಿಯಲ್ಲಿ ಸೈನಿಕ, ನಗರ, ಪಟ್ಟಣಗಳಲ್ಲಿ ಪೌರ ಕಾರ್ಮಿಕರು ಸುಸ್ಥಿತಿಯಲ್ಲಿ ಇದ್ದರೆ ದೇಶ ರಕ್ಷಣೆಯಲ್ಲಿ ಇರಲಿದೆ. ಇದರಲ್ಲಿ ಯಾವುದೇ ಒಂದು ಸರಿ ಇಲ್ಲದಿದ್ದರೆ ದೇಶ ನಾಡು ಊರು ಸುಭದ್ರ ಹಾಗೂ ಆರೋಗ್ಯ ಪೂರ್ಣವಾಗಿ ಇರಲು ಸಾಧ್ಯವಿಲ್ಲ. ನಮ್ಮ ಸುತ ್ತಮುತ ್ತಲಿನ ಪರಿಸರದ ಸ ್ವಚ್ಛತೆಗಾಗಿ, ಆರೋಗ್ಯ ರಕ್ಷಣೆಗಾಗಿ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ ಎಂದರು.
ಪಪಂ ಮುಖ್ಯಾಧಿಕಾರಿ ನರಸರೆಡ್ಡಿ ಮಾತನಾಡಿ, ಪೌರ ಕಾರ್ಮಿಕರು ಜೀವನದ ಹಂಗನ್ನು ತೊರೆದು ಪಟ್ಟಣವನ್ನು ಸ್ವಚ್ಛ ಇಡುವಂತಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಗೌರವದಿಂದ ಕಾಣುವ ಪ್ರವೃತ್ತಿ ಬೆಳೆಯಬೇಕು ಎಂದರು.
ನಾಮ ನಿರ್ದೇಶಿತ ಸದಸ್ಯ ಮರಿಸ್ವಾಮಿ ಹತ್ತಿಗುಡ್ಡ ಮಾತನಾಡಿದರು. ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ಕಂದಗಲ್, ಉಪಾಧ್ಯಕ್ಷೆ ಲಕ್ಷ್ಮೀ ಸೋಮನಾಥ ಮಾಟೂರ, ಸದಸ್ಯ ಶರಣಪ್ಪ ಹೊಸಗೌಡ್ರ, ಹಿರಿಯ ಮುಖಂಡ ಮಲ್ಲನಗೌಡ ದೇವರಮನಿ, ಕಾರ್ಯದರ್ಶಿ ಫಾರೂಖ್‌ಸಾಬ್ ಖಾಜಿ, ವಿಎಸ್‌ಎಸ್‌ಎನ್ ಅಧ್ಯಕ ್ಷ ನಿಂಗಪ್ಪ ಗೋಸಬಾಳ್, ತಾಪಂ ಮಾಜಿ ಸದಸ್ಯ ಉಮರ್‌ಸಾಬ್, ಶಿಕ್ಷಕ ಕರಿಯಪ್ಪ, ಪ್ರಮುಖರಾದ ಮಂಟೆಪ್ಪ ಎಲೆಕೂಡ್ಲಿಗಿ, ಆರ್.ಶಿವನಗೌಡ ತುರ್ವಿಹಾಳ, ಮೌಲಪ್ಪಯ್ಯ ಗುತ್ತೇದಾರ್, ದೊಡ್ಡಪ್ಪ ಕಲ್ಗೂಡಿ, ಕರಿಯಪ್ಪ ವಿರುಪಾಪುರ್, ಅಬುತುರಾಬ್ ಖಾಜಿ, ಯಲ್ಲಪ್ಪ ಭೋವಿ, ಸಿರಾಜ್ ಪಾಷಾ, ಅಮರೇಶ ಕಟ್ಟಿಮನಿ, ಶರಣಬಸವ ರಡ್ಡೆರ್ ಇತರರಿದ್ದರು.