ಜಿಲ್ಲೆ

ಗುತ್ತಿಗೆ ವೈದ್ಯರ ವೇತನ 15 ಸಾವಿರ ರೂ. ಹೆಚ್ಚಳ

ಬೆಂಗಳೂರು: ಕರೊನಾ ಸಂಕಷ್ಟದ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ವೈದ್ಯರ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಮಾಸಿಕ ಸಂಚಿತ ವೇತನವನ್ನು 15 ಸಾವಿರ ರೂ. ಹೆಚ್ಚಳ ಮಾಡಿದೆ. ಆದರೆ ಸಕ್ರಮಕ್ಕೆ ಅನ್ವಯವಿಲ್ಲ ಎಂಬ ಷರತ್ತು ವಿಧಿಸಿದೆ.

ಗುತ್ತಿಗೆ ವೈದ್ಯರು ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು. ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ರಾಜೀನಾಮೆ ಸಹ ಸಲ್ಲಿಸಿದ್ದರು. ವೈದ್ಯರ ಕೊರತೆ ಇರುವುದರಿಂದ ತಕ್ಷಣ ಎಚ್ಚೆತ್ತ ಸರ್ಕಾರ ವೇತನವನ್​ಉ 45,000 ರೂ.ಗಳಿಂದ 60,000 ರೂ.ಗಳಿಗೆ ಹೆಚ್ಚಳ ಮಾಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗ್ರಾಮೀಣ ಭಾಗ, ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರ, ನಗರಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 504 ಜನ ಎಂಬಿಬಿಎಸ್ ಗುತ್ತಿಗೆ ವೈದ್ಯರಿದ್ದಾರೆ. ಕೆಪಿಎಸ್​ಸಿ ಮೂಲಕ ನೇಮಕ ಮಾಡಿಕೊಳ್ಳುವ ತನಕ ಗುತ್ತಿಗೆ ವೈದ್ಯರ ನೇಮಕಕ್ಕೆ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿತ್ತು.