ಮುಧೋಳ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಜೈಲು, ಸೆರೆಮನೆ ವಾಸ, ಚಿತ್ರಹಿಂಸೆ ಅನುಭವಿಸಿ ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನದ ಸೇವೆಗಳು ಅನನ್ಯ ಎಂದು ನಗರಸಭೆ ಮಾಜಿ ಅಧ್ಯಕ್ಷ ಗುರುಪಾದಪ್ಪ ಕುಳಲಿ ತಿಳಿಸಿದರು.
ನಗರಸಭೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ನನ್ನ ದೇಶ, ನನ್ನ ಮಣ್ಣು ಅಭಿಯಾನ ಮಾಲಿಕೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹೋರಾಟಗಾರರ ಕುಟುಂಬ ಸದಸ್ಯರನ್ನು ಕರೆದು ಗೌರವ ಸನ್ಮಾನ ಮಾಡುವುದು ಪವಿತ್ರ ಕಾರ್ಯವಾಗಿದ್ದು, ಈ ದೇಶದ ಮಣ್ಣಿನ ಋಣ ತೀರಿಸುವುದು ಪ್ರತಿಯೊಬ್ಬ ಪ್ರಜೆಯ ಕಾಯಕವಾಗಿದೆ ಎಂದು ತಿಳಿಸಿದರು.
ಪೌರಾಯುಕ್ತ ಶಿವಪ್ಪ ಅಂಬಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಿಟಿಷ್ ಸರ್ಕಾರದ ಗುಲಾಮಗಿರಿಗೆ ಬೇಸತ್ತು ದೇಶದ ಸ್ವಾತಂತ್ರ್ಯಕ್ಕಾಗಿ ದೇಶದ ಉದ್ದಗಲಕ್ಕೂ ಸ್ವಾತಂತ್ರೃ ಹೋರಾಟಗಾರರು ತಮ್ಮ ಪ್ರಾಣತ್ಯಾಗ ಮಾಡಿದರ ಲವಾಗಿ ಇಂದು ನಾವು ಖುಷಿಯಿಂದ ಇದ್ದೇವೆ. ಮಧ್ಯರಾತ್ರಿಯಲ್ಲಿಯೂ ನಿರ್ಭೀತಿಯಿಂದ ಓಡಾಡಲಿಕ್ಕೆ ಸಾಧ್ಯವಾಗಿದೆ. ದೇಶಕ್ಕಾಗಿ ಹೋರಾಟ ಮಾಡಿದ ವಂಶಸ್ಥ ಸದಸ್ಯರಿಗೆ ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ನಗರಸಭೆ ವ್ಯವಸ್ಥಾಪಕಿ ಭಾರತಿ ಜೋಶಿ ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟಂಬಸ್ಥರಾದ ದಿ.ಶಂಕರ ವಿಠೋಬಾ ಮೋರೆ ಅವರ ಪತ್ನಿ ೂಲಾಬಾಯಿ, ದಿ.ಕೃಷ್ಣರಾವ್ ಗುರುನಾಥರಾವ್ ಹುಬ್ಳೀಕರ ಅವರ ಪತ್ನಿ ಮೀರಾಬಾಯಿ, ದಿ. ರಾಮಚಂದ್ರ ಗೋಪಾಲ ಬಾಜಿಯವರ ಪತ್ನಿ ಸೀತಾಬಾಯಿ, ದಿ.ನೇಮಚಂದ್ ತಾರಾಚಂದ್ ಶಹಾ ಅವರ ಪುತ್ರ ಅಶೋಕ ನೇಮಚಂದ ಅವರನ್ನು ಸನ್ಮಾನಿಸಿದರು.
ಕಂದಾಯ ಇಲಾಖೆಯ ಮಹಾದೇವ ಗುಡಿ, ಅಮಿತ ಚಿಕ್ಕೂರ, ರಾಜು ಚವ್ಹಾಣ, ಎಂ.ಬಿ.ಹೊಸೂರು, ಗಣೇಶ ಬುರುಡ, ಮಂಜುನಾಥ ಮೇತ್ರಿ ಉಪಸ್ಥಿತರಿದ್ದರು.