ಜಿಲ್ಲೆ

ಗ್ರಾಮಾಂತರ ಬಸ್ ನಿಲ್ದಾಣ ಅಸ್ತವ್ಯಸ್ತ

ಅವಿನಾಶ್ ಜೈನಹಳ್ಳಿ


ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮಾಂತರ ಬಸ್ ನಿಲ್ದಾಣದ ಮುಂದೆ ಹಾದು ಹೋಗಿರುವ ಬೆಂಗಳೂರು- ನೀಲಗಿರಿ ಹೆದ್ದಾರಿಯು ಕೆಸರು ಗುಂಡಿಯಂತೆ ಆಗಿದೆ.

ರಸ್ತೆ ಬದಿಯಲ್ಲಿ ಮ್ಯಾನ್‌ಹೋಲ್‌ಗಳನ್ನು ದುರಸ್ತಿ ಮಾಡಲು ಕಾಮಗಾರಿ ಮಾಡಿರುವುದರಿಂದ ಡಾಂಬರ್ ಹೋಗಿ ರಸ್ತೆ ತುಂಬಾ ಮಣ್ಣು ಹರಡಿದ್ದು ಗುಂಡಿ ಬಿದ್ದಿದೆ. ಇದರಿಂದಾಗಿ ಬಸ್‌ಗಳು ಸರಿಯಾಗಿ ಸಂಚರಿಸಲು ಆಗದೆ ಬಹಳ ನಿಧಾನಗತಿಯಲ್ಲಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದ ಒಳಗೆ ಹೋಗಲು ಬಸ್‌ಗಳು ಸ್ವಲ್ಪ ಹೊತ್ತು ಆದರೆ ಸಾಕು ಹೊರಗಿನ ರಸ್ತೆಯಲ್ಲಿ ಎರಡೂ ಕಡೆಯಲ್ಲೂ ಹತ್ತಾರು ವಾಹನಗಳು ಸಾಲಾಗಿ ನಿಲ್ಲುತ್ತಿವೆ. ಇದೇ ಅಲ್ಲದೇ ಪಾದಚಾರಿ ಮಾರ್ಗವೂ ನಡೆಯಲು ಯೋಗ್ಯವಲ್ಲದ ರೀತಿ ಇರುವುದರಿಂದ ಜನರು ರಸ್ತೆ ಮಧ್ಯದಲ್ಲಿ ಕೆಸರನ್ನೇ ತುಳಿದುಕೊಂಡು ಓಡಾಡಬೇಕಾಗಿದೆ.