ಜಿಲ್ಲೆ

ಉದ್ಘಾಟಿಸಲಾಗಿದೆ ಹನುಮಾನ ಮಂದಿರದ ಮೇಲ್ಛಾವಣಿ

ಕಾಗವಾಡ: ತಾಲೂಕಿನ ಜುಗೂಳ ಗ್ರಾಮದ ಹನುಮಾನ ಮಂದಿರದ ಮೇಲ್ಛಾವಣಿ ನಿರ್ಮಿಸುವಂತೆ ಮಂದಿರ ಕಮಿಟಿಯ ಸದಸ್ಯರು ಸಂಪರ್ಕಿಸಿದ ಕೂಡಲೇ ನಮ್ಮ ಫೌಂಡೇಷನ್​ ವತಿಯಿಂದ 5 ಲಕ್ಷ ರೂ. ನೀಡಲಾಗಿದ್ದು, ಈಗ ಆ ಮೇಲ್ಛಾವಣಿ ಉದ್ಘಾಟಿಸಲಾಗಿದೆ. ಮುಂದೆಯೂ ಮಂದಿರದ ಅಭಿವೃದಿಟಛಿಗಾಗಿ ಸಹಕಾರ ನೀಡುವುದಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ ಭರವಸೆ ನೀಡಿದರು.

ಶನಿವಾರ ಹನುಮಾನ ಮಂದಿರದಲ್ಲಿ ಶ್ರೀಮಂತ ಪಾಟೀಲ ಫೌಂಡೇಷನ್​ ವತಿಯಿಂದ 5 ಲಕ್ಷ ರೂ.ವೆಚ್ಚದ ಮೇಲ್ಛಾವಣಿ ಉದ್ಘಾಟಿಸಿ ಮಾತನಾಡಿದರು. ಮುಖಂಡ ಅರುಣ ಗಣೇಶವಾಡ ಮಾತನಾಡಿ, ಶ್ರೀಮಂತ ಪಾಟೀಲ ಸಚಿವ ಮತ್ತು ಶಾಸಕರಾಗಿದ್ದಾಗ ನಮ್ಮ ಗ್ರಾಮಕ್ಕೆ ಸಾಕಷ್ಟು ಅನುದಾನ ನೀಡಿ ಗ್ರಾಮದ ಅಭಿವೃದಿಟಛಿಗೆ ಶ್ರಮಿಸಿದ್ದಾರೆ. ಮೇಲ್ಛಾವಣಿ ನಿರ್ಮಿಸಲು ಸಹಾಯ ಕೇಳಿದಾಗ ಕೂಡಲೇ ತಮ್ಮ ಫೌಂಡೇಷನ್​ ವತಿಯಿಂದ 5 ಲಕ್ಷ ರೂ. ನೀಡಿದ್ದಾರೆ. ಅದಕ್ಕಾಗಿ ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತೇನೆ ಎಂದರು. ಮುಖಂಡ ದಾದಾ ಪಾಟೀಲ, ಗ್ರಾಮದ ಮುಖಂಡರು, ಮಂದಿರ ಕಮಿಟಿ ಅಧ್ಯಕ್ಷ, ಉಪಾಧ್ಯಕ್ಷ ಇತರರಿದ್ದರು.