ಸಿದ್ದಾಪುರ : ಭಾರಿ ಗಾಳಿ, ಮಳೆಗೆ ಮನೆ ಛಾವಣಿ ಹಾರಿ ಹೋಗಿ ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರದ ಘಟನೆ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಚಿಕ್ಕ ರೇಷ್ಮೆ ಹಾಡಿಯಲ್ಲಿ ಇತ್ತೀಚೆಗೆ ನಡೆದಿದೆ. ಹಾಡಿಯ ನಿವಾಸಿ ಮಂಜುನಾಥ್ ಎಂಬವರು ರಾತ್ರಿ ನಿದ್ರೆಯಲ್ಲಿ ಇದ್ದ ಸಂದರ್ಭ ಜೋರಾಗಿ ಗಾಳಿಯೊಂದಿಗೆ ಮಳೆ ಸುರಿಯಲಾರಂಭಿಸಿದೆ. ಕೆಲವೇ ನಿಮಿಷಗಳಲ್ಲಿ ಗಾಳಿಗೆ ಶೀಟುಗಳು ಹಾರಿ ಹೋಗಿವೆ. ಮನೆಯಲ್ಲಿದ್ದವರು ಮನೆಯಿಂದ ಹೊರ ಬಂದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.