ಕಾಂಗ್ರೆಸ್ ಯುವ ಮುಖಂಡ ಕರಡಕೆರೆ ಮನು ಅವರ ಹುಟ್ಟು ಹಬ್ಬ ಅಂಗವಾಗಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮವನ್ನು ಶಾಸಕ ಕದಲೂರು ಉದಯ್ ಉದ್ಘಾಟಿಸಿದರು. ಜಿ.ಪಂ.ಮಾಜಿ ಅಧ್ಯಕ್ಷ ಬಿ.ಬಸವರಾಜು, ಮಾಜಿ ಸದಸ್ಯ ಎ.ಎಸ್.ರಾಜೀವ್, ತಾ.ಪಂ. ಮಾಜಿ ಸದಸ್ಯ ಚಲುವರಾಜು ಇದ್ದರು.  
ಜಿಲ್ಲೆ

ನನ್ನ ಗೆಲುವಿಗೆ ಯುವಕರ ಪಾತ್ರ ಮಹತ್ವ

ಕೆ.ಎಂ.ದೊಡ್ಡಿ : ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಲು ಯುವಕರು ಹಾಗೂ ಪಕ್ಷದ ಕಾರ್ಯಕರ್ತರ ಪಾತ್ರ ಮಹತ್ವವಾದುದ್ದು ಎಂದು ಮದ್ದೂರು ಕ್ಷೇತ್ರದ ಶಾಸಕ ಕದಲೂರು ಉದಯ್ ತಿಳಿಸಿದರು.

ಶುಕ್ರವಾರ ಇಲ್ಲಿನ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ಕರಡಕೆರೆ ಮನು ಅವರ ಹುಟ್ಟುಹಬ್ಬ ಅಂಗವಾಗಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಶಾಸಕನ್ನಾಗಿ ಮಾಡಿದ್ದು, ಅವರ ಹಿತ ಕಾಪಾಡುವುದೇ ನನ್ನ ಉದ್ದೇಶ ಎಂದರು.

ಮೂರು ವರ್ಷಗಳ ಹಿಂದೆ ನಾನು ಮದ್ದೂರು ಕ್ಷೇತ್ರಕ್ಕೆ ಜನಸೇವೆ ಮಾಡಲು ಬಂದಾಗ ಯುವ ಸಮುದಾಯ ನನ್ನ ಹಾಗೂ ನನ್ನ ಜನಪರ ಕಾಳಜಿಯನ್ನು ಮನಗಂಡು ನನ್ನನ್ನು ಮದ್ದೂರು ಕ್ಷೇತ್ರದ ಶಾಸಕನನ್ನಾಗಿ ಮಾಡಲು ಹಗಲಿರುಳು ಶ್ರಮಿಸಿದ್ದಾರೆ. ಅವರ ಕಾರ್ಯಕ್ಕೆ ನಾನು ಚಿರಋಣಿಯಾಗಿರುತ್ತೇನೆ ಎಂದರು.

ಕಾಂಗ್ರೆಸ್ ಯುವ ಮುಖಂಡ ಕರಡಕೆರೆ ಮನು ಹಾಗೂ ಶಾಸಕ ಕದಲೂರು ಉದಯ್ ಅವರಿಗೆ ಅಭಿಮಾನಿಗಳು ಬೃಹತ್ ಗಾತ್ರದ ಸೇಬಿನ ಹಾರವನ್ನು ಹಾಕಿ ಸನ್ಮಾನಿಸಿದರು. ಜಿ.ಪಂ.ಮಾಜಿ ಅಧ್ಯಕ್ಷ ಬಿ.ಬಸವರಾಜು, ಮಾಜಿ ಸದಸ್ಯ ಎ.ಎಸ್.ರಾಜೀವ್, ತಾ.ಪಂ. ಮಾಜಿ ಸದಸ್ಯ ಚಲುವರಾಜು, ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಲಿಂಗೇಗೌಡ, ಮಕ್ಕಳ ವೈದ್ಯ ಮೋಹನ ಬಾಬು, ಯುವ ಮುಖಂಡ ಕರಡಕೆರೆ ಮನು ಸೇರಿದಂತೆ ಇತರರಿದ್ದರು.