ದೊಡ್ಡಬಳ್ಳಾಪುರ: ವಿಪತ್ತು ನಿರ್ವಹಣೆ ಹಾಗೂ ದೇಶದ ಉಳಿವಿಗಾಗಿ ನೀವು ಪಡೆದ ತರಬೇತಿ ಸಹಕಾರಿಯಾಗಲಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನೀವೆಲ್ಲರೂ ನಿಸ್ವಾರ್ಥ ಸೇವೆ ಸಲ್ಲಿಸುವಂತಾಗಲಿ ಎಂದು ರಾಜ್ಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಆಯುಕ್ತ ಪಿಜಿಆರ್ ಸಿಂಧ್ಯಾ ಹೇಳಿದರು.
ನಗರದ ಹೊರವಲಯದ ಆ್ಯನಿಬೆಸೆಂಟ್ಪಾರ್ಕ್ನಲ್ಲಿ ಗುರುವಾರ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಯುವ ಅಪಾಯ ಮಿತ್ರ ಯೋಜನೆಯಡಿಆಯೋಜಿಸಿದ್ದ 7 ದಿನಗಳ ಯುವ ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣಾ ಶಿಬಿರದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ನ ಮೊದಲ ಮುಖ್ಯ ಆಯುಕ್ತ ಜಸ್ಟಿಸ್ ಕೆ. ಶಂಕರನಾರಾಯಣ್ ರಾವ್ ಅವರ 146ನೇ ಜಯಂತಿ ಆಚರಣೆಯಲ್ಲಿ ಮಾತನಾಡಿದರು.
ವಿವಿಧ ನೈಸರ್ಗಿಕ ವಿಕೋಪಗಳಿಂದ ದೇಶದಲ್ಲಿ ವಿಪತ್ತು ಸಂಭವಿಸಿದ ವೇಳೆ ವಿಪತ್ತು ನಿರ್ವಹಣಾ ತಂಡವು ತಕ್ಷಣ ನೆರವಿಗೆ ಬರುತ್ತದೆ. 7 ದಿನಗಳಿಂದ ನಡೆದ ಈ ತರಬೇತಿಯಲ್ಲಿ ಪ್ರತಿನಿತ್ಯ ಸಹಕಾರಿಯಾಗುವ ವಿಪತ್ತು ನಿರ್ವಹಣೆಯಿಂದ ಭೂಕಂಪ, ಅಗ್ನಿ ಅನಾಹುತ, ಪ್ರವಾಹಗಳಲ್ಲಿ ಜನರನ್ನು ರಕ್ಷಣೆ ಮಾಡುವ ವಿಧಾನ ತಿಳಿಸಲಾಗಿದೆ. ಅಲ್ಲದೆ, ಮಕ್ಕಳಲ್ಲಿ ದೇಶಭಿಮಾನ, ರಾಷ್ಟ್ರೀಯತೆ ಜತೆಗೆ ರಾಷ್ಟ್ರ ನಿರ್ಮಾಣದ ಪರಿಕಲ್ಪನೆ ಬೆಳೆಸಲಾಗಿದೆ ಎಂದರು.
ಇಂತಹ ತರಬೇತಿ ಶಿಬಿರದಲ್ಲಿ ಭಾಗವಹಿಸುವುದರಿಂದ ಶಿಸ್ತು ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ. ಈ ತರಬೇತಿಯಲ್ಲಿ ಬಹುದೂರದಿಂದ ಬಂದಿರುವ ನೂರಾರು ವಿದ್ಯಾರ್ಥಿಗಳು ಭಾಗವಹಿಸಿರುವುದು ವಿಶೇಷ. ಉತ್ತಮ ಜೀವನಶೈಲಿಗೆ ಇಂತಹ ತರಬೇತಿ ಕಾರ್ಯಗಳು ಅವಶ್ಯ ಎಂದರು. ಸ್ಥಳಿಯವಾಗಿ ಯಾವುದೇ ನೈಸರ್ಗಿಕ ವಿಪತ್ತು ಸಮಸ್ಯೆಇಲ್ಲದೆ ನಾವು ನೀವೆಲ್ಲರೂ ಸುರತವಾಗಿದ್ದೇವೆ. ಆದರೆ ಜಮ್ಮು& ಕಾಶ್ಮೀರ, ಉತ್ತಾರಾಂಚಲ ಪ್ರದೇಶಗಳಲ್ಲಿ ಹೆಚ್ಚು ವಿಪತ್ತು ಸಂಭವಿಸುತ್ತದೆ. ನಮ್ಮ ರಾಜ್ಯದ ಕೋಸ್ಟಲ್ ಏರಿಯಾಗಳಲ್ಲಿ ಆಪತ್ತು ಸಂಭವಿಸುವ ಪ್ರಮಾಣ ಹೆಚ್ಚೊದೆ. ವಿಪತ್ತು ನಿರ್ವಹಣಾ ತಂಡಗಳ ಸಹಾಯದ ಅವಶ್ಯಕತೆ ಹೆಚ್ಚಿರುತ್ತದೆ ಎಂದರು.