ಇಂಡಿ ಡಾ. ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಹುಚ್ಚಪ್ಪ ಶಿವಶರಣ, ಸೋಮು ನಾಯಕ, ಮುತ್ತು ಮುರಾಳ, ಮರೆವ್ವ ಗುಡಮಿ, ಲತಾ ಗುಡುಮಿ, ಸಂತೋಷ ಚವಾಣ್, ನಿಂಬಣ್ಣ ರವಳಿ ಇತರರಿದ್ದರು. 
ಜಿಲ್ಲೆ

ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅಮೋಘ

ಇಂಡಿ: ದೇಶದ ಅಭಿವೃದ್ಧ್ಧಿಯಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಶಿವಶರಣ ಹೇಳಿದರು.

ಪಟ್ಟಣದ ಡಾ. ಅಂಬೇಡ್ಕರ್ ವೃತ್ತ್ತದಲ್ಲಿ ಪುರಸಭೆ ಕಾರ್ಮಿಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ನಗರ ಸುಂದರವಾಗಿ ಕಾಣಲು ಪೌರ ಕಾರ್ಮಿಕರ ಸೇವೆ ಮುಖ್ಯ. ಕಾರ್ಮಿಕರು ನಮ್ಮ ದೇಶದ ಬೆನ್ನೆಲುಬು ಎಂದರು.

ಪೌರ ಕಾರ್ಮಿಕರ ಸಂಘದ ಅಧ್ಯಕ್ಷೆ ಲಕ್ಷ್ಮೀ ಕಾಲೆಭಾಗ, ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಸೋಮು ನಾಯಕ, ಮುತ್ತು ಮುರಾಳ, ಮರೆವ್ವ ಗುಡಮಿ, ಲತಾ ಗುಡುಮಿ, ಸಂತೋಷ ಚವಾಣ್, ನಿಂಬಣ್ಣ ರವಳಿ, ಶ್ರೀಶೈಲ ಹಾದಿಮನಿ, ಚಂದು ಕಾಲೇಭಾಗ, ಹುಸನವ್ವ ಬಳಗಾನೂರ, ಮಲ್ಲಪ್ಪ ನಡಗಡ್ಡಿ, ಕಿರಣ ಶಿಂಧೆ, ಮಲ್ಲಿಕಾರ್ಜುನ ಶಿವಶರಣ, ಯಲ್ಲವ್ವ ಕಂಟಿಕರ ಪಾಲ್ಗೊಂಡಿದ್ದರು.