ಹಳಿಯಾಳ: ಮೌಲ್ಯಯುತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ಸುಮಂಗಲ ಅಂಗಡಿ ಹೇಳಿದರು.
ಪಟ್ಟಣದ ಶಿವಾನುಭೂತಿ ಭವನದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 89ನೇ ಶಿವಮೂರ್ತಿ ಮಹಾಶಿವರಾತ್ರಿಯ ಕಾರ್ಯಕ್ರಮ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಆರೋಗ್ಯ ಮತ್ತು ಒತ್ತಡ ಮುಕ್ತ ಜೀವನಕ್ಕಾಗಿ ರಾಜಯೋಗ ಶಿಬಿರದಲ್ಲಿ ಮಾತನಾಡಿದರು. ಸೇವಾಕೇಂದ್ರದ ಸಂಚಾಲಕಿ ಡಾ. ಬಿ.ಕೆ. ಪದ್ಮಕ್ಕ ಮಾತನಾಡಿದರು. ತಾಲೂಕು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಪೂಜಾ ಧೂಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ ಬಾವಿಕೇರಿ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಜಿ.ಡಿ. ಗಂಗಾಧರ, ಪಿ.ಡಿ. ಮಡಿವಾಳ, ಬಸವರಾಜ ಗಾಣಿಗೇರ, ಸಾವಂತ ಡಿ.ಎಂ, ಸುಜಾತಾ ಬಿರಾದಾರ, ಬ್ರಹ್ಮಕುಮಾರಿ ರಾಜೇಶ್ವರಿ ಅಕ್ಕ, ಬಿ.ಕೆ/ ಗೀತಕ್ಕ ಇದ್ದರು. ಶಿಕ್ಷಕ ಸಿದ್ದಪ್ಪ ಬಿರಾದಾರ ನಿರ್ವಹಿಸಿದರು