ರಾಮದುರ್ಗ: ಶಿಕ್ಷಕರು ಉತ್ತಮ ಸಂಸ್ಕಾರ ನೀಡಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸುತ್ತಾರೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲೂ ಶಿಕ್ಷಕರ ಪಾತ್ರ ಅವಿಸ್ಮರಣೀಯ ಎಂದು ನಿವೃತ್ತ ಪ್ರಾಧ್ಯಾಪಕ ಎಸ್.ಲೇಪಾ ಹೇಳಿದರು.
ಪಟ್ಟಣದ ಪಾಲರೇಶಾ ಕಣ್ಣಿನ ಆಸ್ಪತ್ರೆಯಲ್ಲಿ ಲಯನ್ಸ್ ಸಂಸ್ಥೆ ನೇತೃತ್ವದಲ್ಲಿ ಈಚೆಗೆ ಶಿಕರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಆದರ್ಶ ಶಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಸಂಸ್ಥೆಯ ಜಿಲ್ಲಾ ಚೇರ್ಮನ್ ವೆಂಕಟೇಶ ಹಿರೇರಡ್ಡಿ ಮಾತನಾಡಿ, ಲಯನ್ಸ್ ಸಂಸ್ಥೆ ಸ್ಥಾಪನೆಯಾಗಿ 53 ವರ್ಷಗಳಾಗಿವೆ. ಇಲ್ಲಿಯವರೆಗೂ 100ಕ್ಕೂ ಅಧಿಕ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿದ್ದು, 30ಸಾವಿರಕ್ಕೂ ಅಧಿಕ ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಈ ಸೇವೆ ನಿರಂತರ ಮುಂದುವರೆಯಲಿದೆ ಎಂದರು.
ಕಾಲೇಜು ವಿಭಾಗದಿಂದ ಪ್ರೋ.ಆರ್.ಬಿ.ಸವಟಗಿ, ಹೈಸ್ಕೂಲ್ ವಿಭಾಗದಿಂದ ವೈ.ವಿ.ಮಳಲಿ, ಎ.ಬಿ.ಚಿತ್ತರಗಿ, ಪ್ರಾಥಮಿಕ ವಿಭಾಗದಿಂದ ರಂಗವ್ವ ಮುರಕಟ್ನಾಳ, ಮಹಾದೇವಿ ಬಾಣಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟ್ರಸ್ಟ್ ಚೇರ್ಮನ್ ಆರ್.ಸಿ.ತ್ತೇಪುರ, ಕಾರ್ಯದರ್ಶಿ ರಂಜನಾ ದಿಂಡವಾರ, ಖಜಾಂಚಿ ಡಾ.ವೈಶಾಲಿ ಸಂಕನಗೌಡ್ರ, ಎ.ಜಿ.ಮಳಗಲಿ, ಬಿ.ಪಿ.ಅರಳಿಮಟ್ಟಿ ಇತರರಿದ್ದರು. ಲಯನ್ಸ್ ಸಂಸ್ಥೆಯ ಅಧ್ಯೆ ಸರಳಾ ತ್ತೇಪುರ ಸ್ವಾಗತಿಸಿದರು. ಪ್ರೋ.ಎಸ್.ಎಂ.ಸಕ್ರಿ ನಿರೂಪಿಸಿದರು. ಶಾಂತಾ ಅರಳಿಮಟ್ಟಿ ವಂದಿಸಿದರು.