ವಿಜಯಪುರ: ಸಮಾಜ ಪರಿವರ್ತನೆಯಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದಿದೆ ಎಮದು ಚೇತನ ಪದವಿಪೂರ್ವ ವಿಜ್ಞಾನ ಕಾಲೇಜಿನ ಪ್ರಾಚಾರ್ಯವಿಶ್ವನಾಥ ದಾಬಡೆ ಅಭಿಪ್ರಾಯಪಟ್ಟರು.
ನಗರದ ವಿಜಯವಾಣಿ ಪತ್ರಿಕೆ ಕಚೇರಿಗೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ ಮಾತನಾಡಿದ ಅವರು, ಸರ್ಕಾರ ತಪು$್ಪ ದಾರಿ ದುಳಿದಾಗ ಸರಿದಾರಿಗೆ ತರುವ ಕೆಲಸ ವಿಜಯವಾಣಿ ಮಾಡುತ್ತಿದೆ. ವಿಜಯವಾಣಿ ಪತ್ರಿಕೆಯು ಜನಮನ ಗೆದ್ದಿದೆ. ವಿದ್ಯಾರ್ಥಿಗಳನ್ನು ಕಚೆರಿಗೆ ಕರೆಯಿಸಿಕೊಂಡು ಪರಿಪೂರ್ಣ ಮಾಹಿತಿ ನಿಡುವ ಮಹತ್ತರ ಕಾರ್ಯ ಶ್ಲಾನೀಯ ಎಂದರು.
ಮೋಬೈಲ್, ಕಂಪ್ಯೂಟರ್ ಹಾವಳಿಯಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ವಿಜಯವಾಣಿ ಪತ್ರಿಯು "ವಿಜಯವಾಣಿ ದರ್ಶನ' ಎಂಬ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳನ್ನು ಪತ್ರಿಕೆ ಕಚೇರಿಗೆ ಕರೆಯಿಸಿಕೊಂಡು ಅವರಲ್ಲಿ ಜ್ಞಾನ ವೃದಿಸುವ ಕೆಲಸ ಮಾಡುತ್ತಿದೆ. ಈ ಕಾರ್ಯಕ್ರಮವು ಅಲ್ಪ ಸಮಯದಲ್ಲಿಯೇ ಅಪಾರ ಜನಪ್ರಿಯತೆ ಗಳಿಸುತ್ತಿದೆ. ಕಚೇರಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಹೊಸದನ್ನು ಕಲಿತು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಾದ್ಯಂತ ಶಾಲೆ&ಕಾಲೇಜುಗಳ ಮುಖ್ಯಸ್ಥರು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳನ್ನು ವಿಜಯವಾಣಿ ಕಚೇರಿಗೆ ಕರೆತರಲು ಉತ್ಸುಕರಾಗಿದ್ದಾರೆ.
ಶುಕ್ರವಾರ ಸಂಜೆ ವಿಜಯವಾಣಿ ಕಚೇರಿಗೆ ವಿಜಯಪುರದ ಎಸ್.ಕುಮಾರ ಕಾಲೇಜಿನ ಹಾಗೂ ಸರಸ್ವತಿ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು, ತಮ್ಮ ಶಿಕ್ಷಕ ವರ್ಗದೊಂದಿಗೆ ಭೇಟಿ ನೀಡಿ ಪತ್ರಿಕಾಲಯದ ಎಲ್ಲಾ ವಿಭಾಗಗಳ ದರ್ಶನ ಮಾಡಿ, ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ವಿದ್ಯಾರ್ಥಿನಿಯರು ಪತ್ರಿಕಾಲಯದಲ್ಲಿ ಸುದ್ದಿಗಳ ಸಂಗ್ರಹಣೆ, ಸಂಪಾದನೆ, ಪುಟ ವಿನ್ಯಾಸ, ಜಾಹಿರಾತು, ಪ್ರಸರಣ ವಿಭಾಗಗಳ ಸಂಪೂರ್ಣ ಕಾರ್ಯವಿಧಾನವನ್ನು ಅರಿತುಕೊಂಡರು. ನಂತರ ಅವರನ್ನು ವಿಜಯವಾಣಿ ಮುದ್ರಣ ವಿಭಾಗಕ್ಕೆ ಕರೆದುಕೊಂಡು ಹೋಗಿ ಮುದ್ರಣದ ಹಿಂದಿರುವ ತಾಂತ್ರಿಕ ಟಕದ ದರ್ಶನ ಮಾಡಿಸಲಾಯಿತು.
ವಿಜಯಪುರದ ಚೇತನ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿಜಯವಾಣಿ ಕಚೇರಿಗೆ ಭೇಟಿ ನಿಡಿದರು.